Category: ಅಪರಾಧ

Home ಅಪರಾಧ

ಅನಧಿಕೃತವಾಗಿ ತಲೆ ಎತ್ತಿದ ಪ್ರಾರ್ಥನಾ ಮಂದಿರ: ಆರೋಪ

ಪರವಾನಗಿ ಇಲ್ಲದೇ ಪ್ರಾರ್ಥನಾ ಮಂದಿರ ನಡೆಸುತ್ತಿರುವುದಾಗಿ ಆರೋಪಿಸಿ, ನಗರದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ.

ಅಕ್ರಮ ಮಾರಾಟ: 2 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಆರೋಪಿತರನ್ನು ಬಂಧಿಸಿರುವ ಇಲ್ಲಿನ ಸಿಇಎನ್ ಅಪರಾಧ ಪೊಲೀಸರು 2 ಲಕ್ಷ 10 ಸಾವಿರ ಮೌಲ್ಯದ 8 ಕೆ.ಜಿ. 600 ಗ್ರಾಂ ಗಾಂಜಾ, ಮೊಬೈಲ್, 900 ನಗದು ವಶಪಡಿಸಿಕೊಂಡಿದ್ದಾರೆ.

ಹಡಗಲಿ: ಚೆನ್ನಮ್ಮ ಬ್ಯಾಂಕ್ ನಿರ್ದೇಶಕ ನಂದೀಶ್ ಆತ್ಮಹತ್ಯೆ

ಹೂವಿನಹಡಗಲಿ : ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಬ್ಯಾಂಕ್ ನಿರ್ದೇಶಕ ನಂದೀಶ್ ಪಾಟೀಲ್ ತೊಂಡಿಹಾಳ್ (44) ಅವರು ಗುರುವಾರ ಸಂಜೆ ತಮ್ಮ ಮನೆಯ ಕೊಠಡಿಯಲ್ಲಿ ಉಟ್ಟುಕೊಂಡಿದ್ದ ಲುಂಗಿಯನ್ನು ಫ್ಯಾನ್‌ಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂತರ್ ಜಿಲ್ಲಾ ಕನ್ನ, ಕಳವು ಆರೋಪಿ ಬಂಧನ

ಅಂತರ್ ಜಿಲ್ಲಾ ಕನ್ನ ಕಳವು ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿ, 1 ಲಕ್ಷ ರೂ. ನಗದು, ಒಂದು ತೊಲ ಬಂಗಾರದ ಸರ ಬೆಲೆ 40 ಸಾವಿರ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.

ಅಕ್ರಮ ಸ್ಪೋಟಕ ವಸ್ತುಗಳ ವಶ : ಇಬ್ಬರ ಬಂಧನ

ಅಕ್ರಮವಾಗಿ ಸ್ಪೋಟಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ ರಾಜ್ಯಗಳ ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದ ತಂಡ ಬಂಧಿಸಿದೆ.

ಅಕ್ರಮ ಸ್ಪೋಟಕ ವಸ್ತುಗಳ ವಶ : ಇಬ್ಬರ ಬಂಧನ

ಅಕ್ರಮವಾಗಿ ಸ್ಪೋಟಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ ರಾಜ್ಯಗಳ ಆರೋಪಿಗಳನ್ನು ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದ ತಂಡ ಬಂಧಿಸಿದೆ.

ಗಾಂಜಾ ವಶ : ಬಂಧನ

ಪ್ರತ್ಯೇಕ ಎರಡು ಪ್ರಕರಣ ಗಳಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ನಗರದಲ್ಲಿ ಒಟ್ಟು 390 ಗ್ರಾಂ ಒಣ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಳೇಬಾತಿ ಬಳಿಯ ರಸ್ತೆ ಅಪಘಾತದಲ್ಲಿ ಹಳೇಕುಂದುವಾಡದ ಬೈಕ್ ಸವಾರನ ಸಾವು

ನಗರದ ರಾಷ್ಟ್ರೀಯ ಹೆದ್ದಾರಿ 4ರ ಹಳೇಬಾತಿಯ ಬ್ರಿಡ್ಜ್ ಬಳಿ ಇಂದು ರಾತ್ರಿ 11.30ರ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಹಳೇಕುಂದುವಾಡದ ರೈತ ಮಿಟ್ಲಕಟ್ಟೆ ಮಲ್ಲಿಕಾರ್ಜುನ ಮೃತಪಟ್ಟಿದ್ದಾರೆ. 

ಈಜಲು ಹೋದ ಯುವಕ ನೀರು ಪಾಲು

ಈಜಲು ಹೋಗಿ ಹೊಳೆಯಲ್ಲಿ ಮುಳುಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ  ನಡೆದಿದೆ. ಹರ್ನಾಳು ಗ್ರಾಮದ ಅರುಣ (22) ಸಾವನ್ನಪ್ಪಿದ ಯುವಕ. 

ಅಪಘಾತದಿಂದ ಸಾವು : ಪೊಲೀಸರ ಮೇಲೆ ಹಲ್ಲೆ

ಮೈಸೂರು : ಸಂಚಾರಿ ಪೊಲೀಸರು ತಪಾಸಣೆ ನಡೆಸುವ ವೇಳೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

error: Content is protected !!