Category: ಅಪರಾಧ

Home ಅಪರಾಧ

ವಿರುಪಾಪುರ ; ಲಾರಿ ಪಲ್ಟಿ : ದೂರು ದಾಖಲು

ಕೂಡ್ಲಿಗಿ : ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ವಿರುಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಲಾರಿ ಪಲ್ಟಿಯಾಗಿದೆ. ಲಾರಿ ಜಖಂಗೊಂಡಿದ್ದು ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹರಪನಹಳ್ಳಿ: ಅಪಘಾತ ಮೂವರು ಸಾವು

ಹರಪನಹಳ್ಳಿ : ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‍ಗೆ ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ಹರಪನಹಳ್ಳಿ ಅಗ್ನಿಶಾಮಕ ಠಾಣೆ, ಕುರಿಸಂತೆ ಮುಂಭಾಗದ ರಸ್ತೆಯಲ್ಲಿ ಜರುಗಿದೆ.

ಹೆಬ್ಬಾಳು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ: ಚಾಲಕ ಪಾರು

ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಹೆಬ್ಬಾಳ್ ಗ್ರಾಮದ ಹೊರ ಭಾಗದ ರಾಷ್ಡ್ರೀಯ ಹೆದ್ದಾರಿ-4ರ ಶಿವ ಡಾಬಾದ ಹತ್ತಿರ ಇಂದು ನಡೆದಿದೆ.

ಹಣಕ್ಕಾಗಿ ವೃದ್ಧ ದಂಪತಿಯ ಮೇಲೆ ಹಲ್ಲೆ: ವೃದ್ಧನ ಸಾವು

ನ್ಯಾಮತಿ : ಹಣ ಸುಲಿಗೆ ಮಾಡಲು ವಯೋವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ವೃದ್ಧನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಇಂದು ಬಂಧಿಸಿದ್ದಾರೆ.

ಸೇತುವೆ ಮೇಲಿಂದ ನದಿಗೆ ಉರುಳಿದ ಕಾರು: ಚಾಲಕ ಸಾವು

ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಕಾರು ಉರುಳಿ ಕೆಳಗೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿರುವ ಘಟನೆ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಭದ್ರಾ ನದಿಯ ಹೊಸ ಸೇತುವೆಯಲ್ಲಿ ಇಂದು ನಡೆದಿದೆ.

ಕೂಡ್ಲಿಗಿ : ಕಾಂಗ್ರೆಸ್‌ಗೆ ಆಯ್ಕೆ

ಕೂಡ್ಲಿಗಿ : ಬಳ್ಳಾರಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ ಎಂ. ಮಂಜುನಾಥ್ ಆಯ್ಕೆಯಾಗಿದ್ದಾರೆ. ಆನ್‌ಲೈನ್ ಚುನಾವಣೆಯಲ್ಲಿ ಮತಗಳನ್ನು ಪಡೆಯುವ ಮೂಲಕ ಅವರು ಗೆಲುವು ಪಡೆದಿದ್ದಾರೆ.

ಗುಡೇಕೋಟೆ ಮಠದ ಬಣವೆಗೆ ಬೆಂಕಿ

ಕೂಡ್ಲಿಗಿ : ತಾಲ್ಲೂಕಿನ ಗುಡೇಕೋಟೆಯ ವಿರಕ್ತ ಮಠದಲ್ಲಿರುವ ಶೇಂಗಾ ಉಬ್ಬಲು ಬಣವೆಗೆ ಶನಿವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸಹಸ್ರಾರು ರೂ.ನಷ್ಟು ನಷ್ಟವಾಗಿದೆ.

ಶ್ರೀಗಂಧ ಮರ ಕಳ್ಳರಿಬ್ಬರ ಬಂಧನ

ಶ್ರೀಗಂಧದ ಮರಗಳನ್ನು ಕಡಿದು ತುಂಡು ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಗರದ ಗ್ರಾಮಾಂತರ ಪೊಲೀಸರು 19,450 ಕೆ.ಜಿ.ಯಷ್ಟು ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಹರಿಹರ : ಸೊಸೈಟಿಯಲ್ಲಿ ಕಳ್ಳತನ

ಹರಿಹರ ನಗರದ ಶ್ರೀ ಬಸವೇಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ರಾತ್ರಿ ವೇಳೆ ಕಳ್ಳರು ಬಾಗಿಲು ಒಡೆದು ಸುಮಾರು 45,648 ರೂ. ಕಳ್ಳತನ ಮಾಡಿದ್ದಾರೆ.

ಹರಿಹರ : ಸೊಸೈಟಿಯಲ್ಲಿ ಕಳ್ಳತನ

ಹರಿಹರ ನಗರದ ಶ್ರೀ ಬಸವೇಶ್ವರ ಕೋ ಆಪರೇಟಿವ್ ಸೊಸೈಟಿಯಲ್ಲಿ ರಾತ್ರಿ ವೇಳೆ ಕಳ್ಳರು ಬಾಗಿಲು ಒಡೆದು ಸುಮಾರು 45,648 ರೂ. ಕಳ್ಳತನ ಮಾಡಿದ್ದಾರೆ.

error: Content is protected !!