Category: ಅಪರಾಧ

Home ಅಪರಾಧ

ಎಟಿಎಂ ಹಣ ದೋಚಲು ವಿಫಲ ಯತ್ನ

ಎಟಿಎಂ ಯಂತ್ರದ ಮೇಲೆ ಕಲ್ಲು ಎತ್ತಿ ಹಾಕಿ ಹಣ ದೋಚಲು ಕಳ್ಳರು ವಿಫಲ ಯತ್ನ ನಡೆಸಿರುವ ಘಟನೆ ನಗರದ ವಿವೇಕಾನಂದ ಬಡಾವಣೆಯ ಬಿಐಇಟಿ ಕಾಲೇಜು ಬಳಿ ಭಾನುವಾರ ರಾತ್ರಿ ನಡೆದಿದೆ.

ಹಳೇ ದ್ವೇಷ : ಕೊಲೆಗೆ ಯತ್ನ

ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಗ್ರಾಪಂ ಸದಸ್ಯನಿಗೆ ಚಾಕು ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ನ್ಯಾಮತಿ ತಾಲ್ಲೂಕಿನ ಚೀಲೂರಿನಲ್ಲಿ ನಡೆದಿದೆ.

ಚನ್ನಗಿರಿ, ನಲ್ಲೂರಿನಲ್ಲಿ ತಂಬಾಕು ದಾಳಿ : ದಂಡ

ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರ ಚನ್ನಗಿರಿ ನಗರ ಮತ್ತು ನಲ್ಲೂರಿನ ಬಳಿ ಇರುವ ಅಂಗಡಿ, ಪಾನ್‍ಶಾಪ್, ಹೋಟೆಲ್‍ಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ದಂಡ ವಿಧಿಸಿದೆ. 

ಬಂಗಾರದಂಗಡಿ ಮಾಲೀಕನಿಗೆ ವಂಚನೆ

ಆಭರಣ ತಯಾರಿಸಿ ಕೊಡುವುದಾಗಿ ನಂಬಿಸಿ ಬಂಗಾರದ ಅಂಗಡಿ ಮಾಲೀಕರೋರ್ವರಿಗೆ ವಂಚಿಸಿದ್ದ ಆರೋಪಿತನನ್ನು ಬಂಧಿಸಿ, 12 ಲಕ್ಷದ 7,500 ರೂ. ಮೌಲ್ಯದ 345 ಗ್ರಾಂ ಬಂಗಾರವನ್ನು ಇಲ್ಲಿನ ಬಸವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

3.5 ಲಕ್ಷಕ್ಕೂ ಅಧಿಕ ಮೌಲ್ಯದ ಸ್ಫೋಟಕ ವಸ್ತುಗಳ ಜಪ್ತಿ

ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 3 ಲಕ್ಷದ 62 ಸಾವಿರ ರೂ. ಮೌಲ್ಯದ ಸ್ಫೋಟಕ ವಸ್ತುಗಳು ಸೇರಿದಂತೆ ಒಂದು ವಾಹನ, ಎರಡು ದ್ವಿಚಕ್ರ ವಾಹನಗಳನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಇಂದು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.

ಪತಿಯ ಶವವನ್ನು ಶೌಚಾಲಯದ ಗುಂಡಿಯಲ್ಲಿ ಮುಚ್ಚಿದ ಪತ್ನಿ: ಜೀವಾವಧಿ ಶಿಕ್ಷೆ

ಮದ್ಯವ್ಯಸನಿಯಾಗಿದ್ದ ಪತಿಯ ಹಿಂಸೆ ತಾಳಲಾರದೇ ಆತನನ್ನು ಹತ್ಯೆಗೈದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.

ವರದಕ್ಷಿಣೆ ಕಿರುಕುಳ : ಆತ್ಮಹತ್ಯೆ

ವರದಕ್ಷಿಣೆ ಕಿರುಕುಳದ ಹಿನ್ನೆಲೆ ಮನನೊಂದ ನವ ವಿವಾಹಿತೆಯೋರ್ವಳು ತನ್ನ ತವರು ಮನೆಯಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಂಬೂಬಜಾರ್‍ನಲ್ಲಿ ನಡೆದಿದೆ. 

ಈಚಘಟ್ಟ ಕಲ್ಲು ಕ್ವಾರಿಯಲ್ಲಿ ಸ್ಫೋಟಕ ವಸ್ತು ಜಫ್ತಿ

ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಈಚಘಟ್ಟ ಗ್ರಾಮದ ಸರ್ವೆ ನಂಬರ್ 45/1, 45/2 ರ ಕಲ್ಲು ಕ್ವಾರಿಯ ಮೇಲೆ ಮಾ.16 ರಂದು ದಾಳಿಮಾಡಿದ್ದು, ದಾಳಿಯ ಕಾಲಕ್ಕೆ ಈ ಕೆಳಕಂಡ ಸ್ಫೋಟಕ ವಸ್ತುಗಳನ್ನು ಜಫ್ತಿ ಮಾಡಲಾಗಿದೆ.

ಜೂಜು: 18 ಸಾವಿರಕ್ಕೂ ಅಧಿಕ ನಗದು ವಶ

ಚನ್ನಗಿರಿ ತಾಲ್ಲೂಕಿನ ಕಂಚಿಗನಾಳ್ ಗ್ರಾಮದ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿ, 6 ಮಂದಿಯನ್ನು ಬಂಧಿಸಿ, 18,800 ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!