ಜನರು ಲಸಿಕೆ ಸಿಗದೇ ಸಾಯ್ತಾ ಇದ್ದಾರೆ. ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಅವರು ಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಿದೆ. ಜನರೇ ಪಾಠ ಕಲಿಸಬೇಕು ಅಷ್ಟೇ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ : ಜೆಡಿಎಸ್ ಪ್ರತಿಭಟನೆ
ಬೆಲೆ ಏರಿಕೆ ನಿಯಂತ್ರಣ, ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ, ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಇಂದು ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕೊರೊನಾದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಶೀಘ್ರ ನೆರವು
ಮಲೇಬೆನ್ನೂರು : ಕಡಾರನಾಯ್ಕನಹಳ್ಳಿ ಗ್ರಾಮಕ್ಕೆ ಇಂದು ಸಂಜೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವ ಹಂಚಿನಮನೆ ರೇವಣಪ್ಪ ಅವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಕೋವಿಡ್ನಿಂದ ಮೃತಪಟ್ಟವರ ಪಟ್ಟಿ ಶೀಘ್ರ ಸಲ್ಲಿಸಬೇಕು
ಚನ್ನಗಿರಿ : ಕೋವಿಡ್ನಿಂದ ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರ ದಿಂದ ಪರಿಹಾರ ಸೌಲಭ್ಯ ಕಲ್ಪಿಸುವ ಉದ್ದೇಶ ದಿಂದ ತಾಲ್ಲೂಕಿನಲ್ಲಿ ಕೋವಿಡ್ನಿಂದ ಮರಣ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಪಟ್ಟಿ ಸಿದ್ಧಪಡಿಸಿ, ಶೀಘ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಶಿವಗಂಗಾ ಬಸವರಾಜ್ ನಡೆ ಖಂಡನೀಯ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿರುದ್ಧ ಹೈಕಮಾಂಡ್ಗೆ ಪತ್ರ ಬರೆದು ಅಗೌರವದಿಂದ ನಡೆದುಕೊಂಡ ಶಾಸಕ ಶಿವಗಂಗಾ ಬಸವರಾಜ್ ಅವರ ನಡೆ ಖಂಡನೀಯವಾಗಿದ್ದು, ಕೂಡಲೇ ಅವರು ಸಚಿವರ ಬಳಿ ಕ್ಷಮೆಯಾಚಿಸಬೇಕು
ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ
ಶ್ರೀ ಮಾಧ್ವ ಯುವಕ ಸಂಘದ 44ನೇ ವಾರ್ಷಿಕೋತ್ಸವ ನಾಳೆ ದಿನಾಂಕ 23ರ ಸೋಮವಾರದಿಂದ ಇದೇ ದಿನಾಂಕ 29ರ ವರೆಗೆ ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ನಡೆಯಲಿದೆ.
ಚನ್ನಾಪುರ ಮಠದಲ್ಲಿ ಇಂದು ಕಾರ್ತಿಕ, ನಾಳೆ ಜಾತ್ರೆ
ಹರಪನಹಳ್ಳಿ ತಾಲ್ಲೂಕಿನ ಚನ್ನಾಪುರ ಗ್ರಾಮದ ಮಠದಲ್ಲಿ ಇಂದು ಶ್ರೀ ಮಹೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಹಾಗೂ ನಾಳೆ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನೆರವೇರಲಿದೆ.
ನಿಟುವಳ್ಳಿ : ಇಂದು ಕಾರ್ತಿಕೋತ್ಸವ
ಹೊಸ ಬಡಾವಣೆ, ನಿಟುವಳ್ಳಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 6ಕ್ಕೆ ರುದ್ರಾಭಿಷೇಕ ಹೂವಿನ ಅಲಂಕಾರ, ಸಂಜೆ 7ಕ್ಕೆ ಕಾರ್ತಿಕೋತ್ಸವ ನಡೆಯಲಿದೆ.
ನಾಳೆ ಶ್ರೀ ಗಾಳಿ ದುರ್ಗಾಂಬಿಕಾ ಕಾರ್ತಿಕೋತ್ಸವ
ನಗರದ ವೆಂಕಾಭೋವಿ ಕಾಲೋನಿಯ ಶಕ್ತಿ ದೇವತೆ ಶ್ರೀ ಗಾಳಿ ದುರ್ಗಾಂಬಿಕಾ ದೇವಿಯ ಕಾರ್ತಿಕೋತ್ಸವ ನಾಡಿದ್ದು ದಿನಾಂಕ 24ರ ಮಂಗಳವಾರ ನಡೆಯಲಿದೆ.
ಕೆಟಿಜೆ ನಗರದಲ್ಲಿ ಶ್ರೀ ಮಲ್ಲಿಕಾರ್ಜುನ, ಶ್ರೀ ಕಂಠಿದುರ್ಗಮ್ಮ ಕಾರ್ತಿಕೋತ್ಸವ
ಕೆ.ಟಿ.ಜೆ. ನಗರದ 10ನೇ ತಿರುವಿನಲ್ಲಿರುವ ಗಾಂಧೀಜಿ ಹರಿಜನ ಯುವಕ ಸಂಘದಿಂದ ಶ್ರೀ ಮಲ್ಲಿಕಾರ್ಜುನ ಹಾಗೂ ಶ್ರೀ ಕಂಠಿದುರ್ಗಮ್ಮ ದೇವಸ್ಥಾನದಲ್ಲಿ ಇಂದು -ನಾಳೆ ಸಂಜೆ 7.30ಕ್ಕೆ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕಾರ್ತಿಕೋತ್ಸವ ನೆರವೇರಿಸಲಾಗುವುದು
ಹದಡಿಯಲ್ಲಿ ಇಂದು ಕಾರ್ತಿಕ
ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಸ್ವಾಮಿ ಕಾರ್ತಿಕೋತ್ಸವವು ಇಂದು ರಾತ್ರಿ ಜರುಗಲಿದೆ. ಬೆಳಿಗ್ಗೆ 8.30 ರಿಂದ 10.30 ರವರೆಗೆ ಜವಳ ಕಾರ್ಯಕ್ರಮ ನಡೆಯಲಿದೆ.
ನಗರದಲ್ಲಿ ಇಂದಿನಿಂದ ಓಶೋ ಧ್ಯಾನ ಶಿಬಿರ
ಓಶೋ ಸನ್ನಿಧಿ ಇನ್ಸೈಟ್ ಫೌಂಡೇಶನ್ ವತಿಯಿಂದ ಓಶೋ ಧ್ಯಾನ ಶಿಬಿರವನ್ನು ಇಂದಿನಿಂದ ಇದೇ ದಿನಾಂಕ 29ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7.30ರವರೆಗೆ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ಏರ್ಪಡಿಸಲಾಗಿದೆ
ಜ. 5 ರಂದು ನಗರದಲ್ಲಿ ಅದ್ಧೂರಿ ಕನಕ ದಾಸರ ಜಯಂತ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ
ದಾವಣಗೆರೆ ಕುರುಬ ಸಮಾಜದ ವತಿಯಿಂದ ಬರುವ ಜನವರಿ 5 ರಂದು ಬೆಳಿಗ್ಗೆ 11.30 ಕ್ಕೆ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ 537ನೇ ಕನಕದಾಸರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ಇಂದು ಶ್ರೀ ಮಾರ್ಕಂಡೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ
ಇಂದು ಬೆಳಿಗ್ಗೆ 6.30 ಕ್ಕೆ ಏಕದಶ ರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ಸಂಜೆ 5.30 ಕ್ಕೆ ಏಕದಶ ರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ, ಮಹಾಪೂಜೆ ಮುಗಿದ ನಂತರ ರಾತ್ರಿ 7 ಗಂಟೆಗೆ ಕುಲದೇವರಾದ ಮಾರ್ಕಂಡೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಜರುಗಲಿದೆ
ನಗರದಲ್ಲಿ ಇಂದು ಮಾಚಿದೇವ ಕಾರ್ತಿಕ
ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘ, ಮಡಿಕಟ್ಟೆ ಸಮಿತಿ ಹಾಗೂ ಮಾಚಿದೇವ ಮಹಿಳಾ ಸಂಘದಿಂದ ಇಂದು ಸಂಜೆ 6.30ಕ್ಕೆ ಮಡಿವಾಳ ಮಾಚಿದೇವ ಸ್ವಾಮಿ ಕಾರ್ತಿಕೋತ್ಸವ ನಡೆಯಲಿದೆ.
ನಗರದಲ್ಲಿ ಇಂದು ಅಮಿತ್ ಷಾ ವಿರುದ್ಧ ಪ್ರತಿಭಟನೆ
ಬಾಬಾ ಸಾಹೇಬ್ ಅಂಬೇಡ್ಕರ್ವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಬೇಕು ಮತ್ತು ಅವರು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿ, ಡಿ.23ರ ಬೆಳಗ್ಗೆ 10.30ಕ್ಕೆ ಸಂವಿಧಾನ ರಕ್ಷಣಾ ವೇದಿಕೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದೆ.
ಹರಿಹರದಲ್ಲಿ ನಾಳೆ ಮಹೇಶ್ವರ ಜಾತ್ರೆ
ಶ್ರೀ ಮಹೇಶ್ವರ ಸೇವಾ ಸಮಿತಿಯ ವತಿಯಿಂದ ತುಂಗಭದ್ರಾ ನದಿ ತಟದಲ್ಲಿರುವ ಶ್ರೀ ಸಂಗಮೇಶ್ವರ, ಶ್ರೀ ಮಹೇಶ್ವರ ದೇವಸ್ಥಾನದಲ್ಲಿ ನಾಳೆ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರೆಯನ್ನು ಆಚರಿಸಲಾಗುವುದು
ಆಂಜನೇಯ ಬಡಾವಣೆಯಲ್ಲಿ ಶ್ರೀ ಬನ್ನಿಮಹಾಂಕಾಳಿ ದೇವಿ ಕಾರ್ತಿಕ
ನಗರದ ಆಂಜನೇಯ ಬಡಾವಣೆ ಬಿಐಇಟಿ ಕಾಂಪೌಂಡ್ನ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನ ಅಭಿವೃದ್ಧಿ ಸಮಿತಿಯಿಂದ 12ನೇ ವರ್ಷದ ಶ್ರೀ ಬನ್ನಿಮಹಾಂಕಾಳಿ ದೇವಿಯ ಕಡೇ ಕಾರ್ತಿಕ ಮತ್ತು ದೀಪೋತ್ಸವ ಜರಿಗಿತು.
ನಗರದಲ್ಲಿ ಇಂದು `ಗುರುದೇವರೊಂದಿಗೆ ಧ್ಯಾನ’ ಕಾರ್ಯಕ್ರಮ
ಆರ್ಟ್ ಆಫ್ ಲಿವಿಂಗ್ ವತಿಯಿಂದ ದಾವಣಗೆರೆ ಡಾ. ಸದ್ಯೋಜಾತ ಸ್ವಾಮೀಜಿ ಯವರ ಹಿರೇಮಠದ 1 ನೇ ಮಹಡಿಯಲ್ಲಿ ಇಂದು ಸಂಜೆ 7 ರಿಂದ 8 ರವರೆಗೆ ಗುರುಪೂಜೆ ಮತ್ತು ಸತ್ಸಂಗ ನಡೆಯಲಿದೆ.
ನಾಳಿನ ಜಿಲ್ಲಾ ಕುರುಬರ ಸಂಘದ ಸಭೆ ಮುಂದೂಡಿಕೆ
ನಾಳೆ ದಿನಾಂಕ 22ರ ಭಾನುವಾರ ಬೆಳಿಗ್ಗೆ 11 ಕ್ಕೆ ನಗರದ ಶ್ರೀ ಬೀರೇಶ್ವರ ಹಾಸ್ಟೆಲ್ನಲ್ಲಿ ಬಿ.ಹೆಚ್. ಪರಶುರಾಮಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಜಿಲ್ಲಾ ಕುರುಬರ ಸಂಘದ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ
ನಗರದಲ್ಲಿ ನಾಳೆ ವಾಸ್ಕ್ಯುಲರ್ ಚಿಕಿತ್ಸೆ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವಾಸ್ಕ್ಯುಲರ್ ತಜ್ಞ ಡಾ. ಬಿ. ರಾಜೇಂದ್ರ ಪ್ರಸಾದ್ ಅವರು ನಗರದ ಆರೈಕೆ ಆಸ್ಪತ್ರೆಯಲ್ಲಿ ನಾಡಿದ್ದು ದಿನಾಂಕ 22ರ ಭಾನುವಾರ ಬೆಳಿಗ್ಗೆ 10 ರಿಂದ ಮಧಾಹ್ನ 1 ರವರೆಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ.
ನಗರದಲ್ಲಿಂದು ಸಾಂಸ್ಕೃತಿಕ ವೈಭವ
ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡರ ಬಣ) ಪಾದಚಾರಿ ವ್ಯಾಪಾರಿ ನಗರ ಘಟಕದಿಂದ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃ ತಿಕ ವೈಭವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಾಳೆ ದಿನಾಂಕ 21ರ ಶನಿವಾರ ಹಮ್ಮಿಕೊಳ್ಳಲಾಗಿದೆ
ನಾಡಿದ್ದು ಶ್ರೀ ಮಾರ್ಕಂಡೇಶ್ವರ ಕಾರ್ತಿಕ
ಇಲ್ಲಿನ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ವತಿಯಿಂದ ಇದೇ ದಿನಾಂಕ 23ರ ಸೋಮವಾರ ಬೆಳಿಗ್ಗೆ ಅಭಿಷೇಕ ಮತ್ತು ಇತರೆ ಪೂಜೆಗಳ ನಂತರ ರಾತ್ರಿ 7 ಗಂಟೆಗೆ ಕುಲದೇವರಾದ ಮಾರ್ಕಂಡೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಜರುಗಲಿದೆ
ಸಿ.ಟಿ. ರವಿ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಎಸ್ಸೆಸ್ ಒತ್ತಾಯ
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮಧ್ಯೆ ನಡೆದ ಮಾತಿನ ಚಕಮಕಿಯಲ್ಲಿ ರವಿ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವುದನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಖಂಡಿಸಿದ್ದಾರೆ.
`ಗ್ರಾಮ ಕಾಯಕ ಮಿತ್ರ’ ಹುದ್ದೆಗೆ ಅರ್ಜಿ
ಹೊನ್ನಾಳಿ : ತಾಲ್ಲೂಕಿನ ಹನುಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ `ಗ್ರಾಮ ಕಾಯಕ ಮಿತ್ರ' 1 ಹುದ್ದೆಗೆ ಗೌರವ ಧನ ಪಾವತಿ ಆಧಾರದ ಮೇಲೆ ಅರ್ಹ ಮಹಿಳೆಯರಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರವಿ ಪರಿಷತ್ ಸದಸ್ಯತ್ವ ವಜಾಕ್ಕೆ ಒತ್ತಾಯ
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕುರಿತಾಗಿ ಕೆಟ್ಟ ಪದ ಬಳಸಿದ್ದು ಖಂಡನೀಯ. ತಕ್ಷಣವೇ ಅವರ ಸದಸ್ಯತ್ವ ವಜಾಗೊಳಿಸಬೇಕು ಎಂದು ಬಿ. ವೀರಣ್ಣ ಆಗ್ರಹ ಮಾಡಿದ್ದಾರೆ
ನಗರದಲ್ಲಿ ಇಂದು ಕನ್ನಡ ಹಬ್ಬ
ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 3ನೇ ವರ್ಷದ ಕನ್ನಡ ಹಬ್ಬ ಹಾಗೂ 69ನೇ ಕನ್ನಡ ರಾಜ್ಯೋತ್ಸವವನ್ನು ಡಿ.21ರ ಇಂದು ಸಂಜೆ 5.30ಕ್ಕೆ ಇಲ್ಲಿನ ಜಯದೇವ ವೃತ್ತದ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ
ಸಿ.ಟಿ. ರವಿ ಬಂಧನ ಖಂಡಿಸಿ ನಗರದಲ್ಲಿ ಇಂದು ಬಿಜೆಪಿ ಪ್ರತಿಭಟನೆ
ಸಿ.ಟಿ. ರವಿ ಬಂಧನವನ್ನು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಬಿಜೆಪಿ ಕಾರ್ಯಾಲಯದಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಎನ್. ತಿಳಿಸಿದ್ದಾರೆ.
ನಾಡಿನ ಶ್ರೇಷ್ಠ ಕವಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಬೇಕು
ಪ್ರತೀ ಐದು ವರ್ಷಕ್ಕೊಮ್ಮೆ ನಾಡಿನ ಶ್ರೇಷ್ಠ ಕವಿಯನ್ನು ಗುರುತಿಸಿ, ರಾಷ್ಟ್ರಕವಿ ಎಂದು ಪ್ರಶಸ್ತಿ ಪ್ರದಾನ ಮಾಡಬೇಕು ಎಂಬ ನಿರ್ಣಯವನ್ನು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವುದರ ಮೂಲಕ ಸರ್ಕಾರಕ್ಕೆ ಒತ್ತಾಯಿಸಬೇಕು
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಶೀಘ್ರ ನಡೆಸಲಿ
ಮಂಡ್ಯದಲ್ಲಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶ್ಯಾಧ್ಯಕ್ಷ ಡಾ. ಬಿ.ಎಂ. ಪಟೇಲ್ ಪಾಂಡು ಅವರು ಆರು ನಿರ್ಣಯಗಳನ್ನು ಮಂಡಿಸಿದರು.
ಟೆಂಟ್ ಮುಕ್ತ ರಾಜ್ಯ : ಅಲೆಮಾರಿ ಅಭಿವೃದ್ಧಿ ನಿಗಮದ ಗುರಿ
ಹೊನ್ನಾಳಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗದವರು ಇನ್ನು ಟಂಟ್ಗಳಲ್ಲಿ ವಾಸಿಸುತ್ತಿದ್ದು, ಅಲೆಮಾರಿ ಜನಾಂಗಕ್ಕೆ ಸೂಕ್ತ ನಿವೇಶನದೊಂದಿಗೆ ವಾಸಿಸಲು ಮನೆ ನಿರ್ಮಾಣ ಮಾಡಿ ಕರ್ನಾಟಕವನ್ನು ಟೆಂಟ್ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಇದೆ
ನಗರದಲ್ಲಿ ಇಂದು ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ಇಂದು ಬೆಳಿಗ್ಗೆ 10 ರಿಂದ 12 ರವರೆಗೆ ಹಾಗೂ ಹರಿಹರ ಸಮೀಪದ ಕೋಡಿ ಯಾಲ-ಹೊಸ ಪೇಟೆಯ ಪುಣ್ಯಕೋಟಿ ಮಠದಲ್ಲಿ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
ಜಗಳೂರು : ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಡಿಎಸ್ ಎಸ್ ಮನವಿ
ಜಗಳೂರು : ಸಂಸತ್ ಕಲಾಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಡಿಎಸ್ ಎಸ್ ನೇತೃತ್ವದಲ್ಲಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗೆ ಲಿಖಿತ ಮನವಿ ಸಲ್ಲಿಸಲಾಯಿತು.
ಕಡಲೆಯಲ್ಲಿ ಯಾಂತ್ರೀಕೃತ ಕಟಾವಿಗೆ ಸೂಕ್ತ ತಳಿಗಳ ಪ್ರಯೋಗ
ಚನ್ನಗಿರಿ : ಕಡಲೆ ಪ್ರಮುಖವಾದ ದ್ವಿದಳ ಧಾನ್ಯ ಬೆಳೆಯಾಗಿದ್ದು, ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕಡಲೆ ಬೆಳೆಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಅಧಿಕ ಇಳುವರಿ ಕೊಡುವ ತಳಿಗಳ ಪರಿಚಯ ಅಗತ್ಯವಿದೆ
ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ
ಹರಪನಹಳ್ಳಿ : 88ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ನಿರ್ಧರಿಸಲಾಗಿದೆ
ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ತರಬೇತಿ
ಡಾ.ಪ್ರಭಾ ಮಲ್ಲಿಕಾರ್ಜುನ್ ಬೆಂಗಳೂರಿನ ಕ್ಯೂ -ಸ್ಪೈಡರ್ಸ್ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ನ ಕೇಂದ್ರ ಕಚೇರಿ ಹಾಗೂ ಟೆಸ್ಟ್ ಯಂತ್ರ ಸಾಫ್ಟ್ವೇರ್ ಕಂಪನಿಗೆ ಭೇಟಿ ನೀಡಿ, ಕ್ಯೂ-ಸ್ಪೈಡರ್ಸ್ ಸಂಸ್ಥಾಪಕ ಹಾಗೂ ಸಿಇಓ ಗಿರೀಶ್ ರಾಮಣ್ಣನವರೊಂದಿಗೆ ಚರ್ಚಿಸಿದರು.
ನೈಸರ್ಗಿಕ ಚೆಲುವಿಗೆ ಮರಳುತ್ತಿರುವ ಕುಂದುವಾಡ ಕೆರೆ
ಕೆರೆ, ನದಿ, ತೊರೆಗಳು ನಿಸರ್ಗದತ್ತ ಜೀವಸೆಲೆಗಳು. ಅಸಂಖ್ಯಾತ ಜೀವಿಗಳು ನೀರಿನಿಂದಲೇ ಉಗಮಗೊಂಡಿವೆ. ದಾವಣಗೆರೆ ನಗರದ ಕುಂದುವಾಡ ಕೆರೆ ಒಂದು ನೈಸರ್ಗಿಕ ತಾಣವಾಗಿತ್ತು.
ಆರ್ಪಿಎಫ್ ಮುಖ್ಯಪೇದೆ ಶಿವಾನಂದಗೆ ‘ರೈಲು ಸೇವಾ ಪುರಸ್ಕಾರ’
ರೈಲು ಪ್ರಯಾಣಿಕರ ಜೀವ ಉಳಿಸುವ ಮತ್ತು ಆಸ್ತಿ ರಕ್ಷಣೆಯಲ್ಲಿ ಪ್ರಮುಖ ಸೇವೆ ಸಲ್ಲಿಸಿದ ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ ನೀಡುವ ಅತಿ ವಿಶಿಷ್ಟ ‘ರೈಲು ಸೇವಾ ಪುರಸ್ಕಾರ’ ದಾವಣಗೆರೆ ರೈಲ್ವೆ ರಕ್ಷಣಾ ದಳದ ಮುಖ್ಯ ಪೇದೆ ಟಿ. ಶಿವಾನಂದ ಅವರಿಗೆ ನೀಡಲಾಗಿದೆ.
ಶ್ರೀ ವೇಮನಾನಂದ ಸ್ವಾಮೀಜಿ ಜನ್ಮದಿನ
ಮಲೇಬೆನ್ನೂರು : ವೇಮನಾನಂದ ಶ್ರೀಗಳು ಸರಳತೆ, ಮುಂದಾಲೋಚನೆ, ಮಾತೃತ್ವ ಭಾವನೆ ಹೊಂದಿರುವಂತಹ ಸೌಮ್ಯ ಸ್ವಭಾವದ ಗುರುಗಳಾಗಿದ್ದಾರೆ ಎಂದು ಯಲವಟ್ಟಿ ಸಿದ್ದಾಶ್ರಮದ ಯೋಗಾನಂದ ಶ್ರೀಗಳು ಅಭಿಪ್ರಾಯಪಟ್ಟರು.
ನಗರದ ಧ.ರಾ.ಮ. ವಿಜ್ಞಾನ ಕಾಲೇಜು ಅಭಿವೃದ್ಧಿಗೆ ಕೈಜೋಡಿಸೋಣ
ಡಿಆರ್ಎಂ ಕಾಲೇಜಿಗೆ ತನ್ನದೇ ಆದ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಇದು ನಿರಂತರವಾಗಿ ವಿದ್ಯಾದಾನ ಮಾಡುತ್ತಿರುವ ಕಾಲೇಜಾಗಿದೆ. ಇದರ ಬೆಳವಣಿಗೆಗೆ ನಾವೆಲ್ಲರೂ ಕೈಜೋಡಿಸೋಣ
ಸರ್ಕಾರಿ ಶಾಲೆ ಉನ್ನತೀಕರಣಕ್ಕೆ ಗ್ರಾಮಸ್ಥರ ಶ್ರಮ ಅಗತ್ಯ
ಮಲೇಬೆನ್ನೂರು : ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಎಸ್ಡಿಎಂಸಿ, ಪೋಷಕರು ಮತ್ತು ಗ್ರಾಮಸ್ಥರು ಶ್ರಮವಹಿಸಬೇಕೆಂದು ದಾವಣಗೆರೆ ಡಯಟ್ ಉಪನ್ಯಾಸಕರು ಹಾಗೂ ಬೈಲಿಗಲ್ ಭಾಷಾ ಆಂಗ್ಲ ಮಾಧ್ಯಮ ಶಾಲೆಗಳ ಜಿಲ್ಲಾ ನೋಡಲ್ ಅಧಿಕಾರಿ ಶ್ರೀಮತಿ ಪೂರ್ಣಿಮಾ ಮನವಿ ಮಾಡಿದರು.
ಡಿಹೆಚ್ಯುಎಸ್ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ
ಇಂದಿಲ್ಲಿ ಮುಕ್ತಾಯಗೊಂಡ ಸ್ಥಳೀಯ ಸಹಕಾರ ಬ್ಯಾಂಕುಗಳ, ಉದ್ಯೋಗಿಗಳ ಸಹಕಾರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬ್ಯಾಡ್ಮಿಂಟನ್ : ಸಿದ್ದೇಶ್, ಡಾ. ಸಂಜೀವ್ ಪ್ರಥಮ
ನಗರದಲ್ಲಿ ಇಂದು ಜಿಜಿಸಿಎಲ್ನಿಂದ ನಡೆದ 40 ವರ್ಷ ಮೇಲ್ಪಟ್ಟವರ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೆ.ಬಿ. ಸಿದ್ದೇಶ್ ಮತ್ತು ಡಾ. ಸಂಜೀವ್ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ.
ತಕ್ಷಣ ಭದ್ರಾ ನೀರು ಹರಿಸಲು ಸತೀಶ್ ಆಗ್ರಹ
ಜಿಲ್ಲೆಯಲ್ಲಿ ರೈತರು ಬೇಸಿಗೆ ಹಂಗಾಮಿಗಾಗಿ ಭತ್ತದ ಬೀಜ ಚೆಲ್ಲುವ ಭರಾಟೆ ಜೋರಾಗಿದೆ. ಕೆಲವು ರೈತರು ಭೂಮಿ ಉಳುಮೆ ಮಾಡಿಕೊಂಡು, ಹದಗೊಳಿಸಿ, ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಚೆಲ್ಲು ಭತ್ತದ ಬಿತ್ತನೆಗೆ ಸಜ್ಜಾಗಿದ್ದಾರೆ.
108 ಲಿಂಗೇಶ್ವರ ದೇಗುಲದಲ್ಲಿ ಭಕ್ತಿಗೀತೆ ಸಂಗೀತ ಕಾರ್ಯಕ್ರಮ
ಹರಿಹರ : ನಗರದ ಭರಂಪುರ ಬಡಾವಣೆಯ 108 ಲಿಂಗೇಶ್ವರ ದೇವಸ್ಥಾನದಲ್ಲಿ 7ನೇ ದಿನದ ಗುಡ್ಡಾಪುರ ದಾನಮ್ಮ ದೇವಿಯ ಪ್ರವಚನ ಕಾರ್ಯಕ್ರಮ ಹರಿಹರದ ಚೌಡೇಶ್ವರಿ ಭಕ್ತ ಮಂಡಳಿಯಿಂದ ದೇವಿಯ ಭಕ್ತಿ ಗೀತೆಗಳು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸ್ಕೇಟಿಂಗ್ ಚಾಂಪಿಯನ್ಶಿಪ್
ಬಳ್ಳಾರಿ ಜಿಲ್ಲೆ ಸಿರಗುಪ್ಪದಲ್ಲಿ ಕಳೆದ ವಾರ ನಡೆದ ರಾಜ್ಯ ಮಟ್ಟದ ಮುಕ್ತ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ನಗರದ ಸ್ಕೇಟರ್ಗಳಾದ ಫಲಕ್ ನಿಗಾರ್ 3 ಚಿನ್ನದ ಪದಕ, ಚಿರಂತ್ ಜಿ.ಎಸ್. 2 ಚಿನ್ನದ ಪದಕ, ಶ್ರೀಶಾನ್ 2 ಕಂಚಿನ ಪದಕ ಹಾಗೂ ಸೌರಬ್ 2 ಕಂಚಿನ ಪದಕ ಪಡೆದಿದ್ದಾರೆ.
ಅಮಿತ್ ಶಾ ವಜಾಗೊಳಿಸಲು ಡಿಎಸ್ಸೆಸ್ ಆಗ್ರಹ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಷ್ಟ್ರಪತಿಗಳಿಗೆ ಒತ್ತಾಯಿಸಿದೆ.
ಕನ್ನಡ ಮನಸುಗಳ ಏಕೀಕರಣವಾಗಬೇಕು
ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡ ಮನಸ್ಸುಗಳ ಏಕೀಕರಣ ಮೊದಲು ಆಗಬೇಕು. ನಾಡಿನಲ್ಲಿ ಇರುವ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು.
ತುರ್ಚಘಟ್ಟ : ಮಕ್ಕಳಿಗೆ ನಗದು ಠೇವಣಿ ಪತ್ರಗಳ ವಿತರಣೆ
ಸಮೀಪದ ತುರ್ಚಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಗದು ಠೇವಣಿ ಪತ್ರಗಳ ವಿತರಣೆ ಸಮಾರಂಭವನ್ನು ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆಸ್ಪತ್ರೆ ಶಿಥಿಲ ಕಟ್ಟಡ ವೀಕ್ಷಿಸಿದ ಶಾಸಕ ಕೆ.ಎಸ್. ಬಸವಂತಪ್ಪ
ಜಿಲ್ಲಾ ಸಾರ್ವಜನಿಕ ಚಿಗಟೇರಿ ಆಸ್ಪತ್ರೆಯಲ್ಲಿ ಈಚೆಗೆ ಮೇಲ್ಚಾವಣಿಯ ಪದರು ಕಳಚಿ ಬಿದ್ದು ಮೂವರು ಗಾಯಗೊಂಡ ಹಿನ್ನೆಲೆ ಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಶನಿವಾರ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶ್ಯಾಬನೂರಿನಲ್ಲಿ ಆಂಜನೇಯ ಸ್ವಾಮಿ ಕಾರ್ತಿಕ, ಸಾಮೂಹಿಕ ವಿವಾಹ
ಶ್ಯಾಬನೂರಿನ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕ ದೀಪೋತ್ಸದ ಪ್ರಯುಕ್ತ ನಿನ್ನೆ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನೂತನ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಾಳೆ ನಗರ ದೇವತೆ ದುರ್ಗಾಂಬಿಕಾ ದೇವಿ ಕಾರ್ತಿಕ
ನಗರ ದೇವತೆ ಶ್ರೀ ದುರ್ಗಾಂ ಬಿಕಾ ದೇವಿ ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 24ರ ಮಂಗಳವಾರ ರಾತ್ರಿ 8.30 ಗಂಟೆಗೆ ನೆರವೇರಲಿದೆ
ನಗರಕ್ಕೆ ಇಂದು ಸೋದೆ ಮಠದ ಶ್ರೀಗಳು
ಸೋದೆ ಶ್ರೀ ವಾದಿರಾಜ ಮಠದ ಶ್ರೀ ಗುರು ವಲ್ಲಭ ತೀರ್ಥ ಶ್ರೀಪಾದಂಗಳವರು ಇಂದು ನಗರಕ್ಕೆ ಸಂಜೆ 6.30 ಆಗಮಿಸಲಿದ್ದು, ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಿಂದ ವಿನೋಬನಗರ 1ನೇ ಮುಖ್ಯ ರಸ್ತೆಯಲ್ಲಿರುವ ನಲ್ಲೂರು ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನಕ್ಕೆ ಮೆರವಣಿಗೆ ಮೂಲಕ ಕರೆ ತರಲಾಗುವುದು.
ನಗರದಲ್ಲಿ ಇಂದು ಕಾಯಿಪೇಟೆ ಬಸವೇಶ್ವರ ಕಾರ್ತಿಕೋತ್ಸವ, ನಾಳೆ ಮಹೇಶ್ವರ ಜಾತ್ರೆ
ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ಇಂದು ರಾತ್ರಿ 9 ಗಂಟೆಗೆ ಕಡೆ ಕಾರ್ತಿಕೋತ್ಸವ ನಡೆಯಲಿದೆ.
ನಗರದಲ್ಲಿ ಇಂದು ಶ್ರೀ ಜಿಹ್ವೇಶ್ವರ ಕಾರ್ತಿಕ
ಶ್ರೀ ವೀರ ಮದಕರಿ ನಾಯಕ ವೃತ್ತ (ಹೊಂಡದ ಸರ್ಕಲ್) ದ ಬಳಿಯ ಸ್ವಕುಳಸಾಳಿ ಸಮಾಜದ ಶ್ರೀ ಜಿವ್ಹೇಶ್ವರ ಧ್ಯಾನ ಮಂದಿರದಲ್ಲಿ ಸ್ವಕುಳಸಾಳಿ ಸಮಾಜದ ಮಹಿಳಾ ಮಂಡಳಿ ವತಿಯಿಂದ ಇಂದು ಸಂಜೆ 5.30ಕ್ಕೆ ಶ್ರೀ ಜಿಹ್ವೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ
ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಷಾ ಕ್ಷಮೆಗೆ ಸಂಸದೆ ಡಾ. ಪ್ರಭಾ ಆಗ್ರಹ
ಸಂಸತ್ತಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರು ದೇಶದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು
ನಗರದ ಸವಿತಾ ಸಮಾಜದಲ್ಲಿ ಇಂದು ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವ
ಕೊಂಡಜ್ಜಿ ರಸ್ತೆಯಲ್ಲಿರುವ ಸವಿತಾ ಸಮಾಜದ ಮಾರುತಿ ಮಂದಿರದಲ್ಲಿ ಶ್ರೀ ಆಂಜನೇಯ ಸ್ವಾಮಿ ಕಾರ್ತಿಕೋತ್ಸವವನ್ನು ಇಂದು ರಾತ್ರಿ 7.30 ಘಂಟೆಗೆ ನಡೆಸಲಾಗುವುದು.
ಕೊಕ್ಕನೂರಿನಲ್ಲಿ ಇಂದು ಹನುಮಪ್ಪನ ಕಾರ್ತಿಕೋತ್ಸವ
ಮಲೇಬೆನ್ನೂರು ಸಮೀಪದ ಕೊಕ್ಕನೂರು ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವರ ಕಡೇ ಕಾರ್ತಿಕ ಮಹೋತ್ಸವ ಮತ್ತು ಸ್ವಾಮಿಯ ಆಷ್ಟೋತ್ಸವವು ಇಂದು ಸಂಜೆ 6 ರಿಂದ ಜರುಗಲಿದೆ.
ನಗರದ ಐರಣಿ ಶಾಖಾ ಮಠದಲ್ಲಿ ಇಂದು ಕಾರ್ತಿಕೋತ್ಸವ
ನಗರದ ಶಿವಾಜಿನಗರದ ಬಳಿಯ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಬಳಿ ಇರುವ ರಾಣೇಬೆನ್ನೂರು ತಾಲ್ಲೂಕಿನ ಐರಣಿ ಹೊಳೆ ಮಠದ ಶಾಖಾ ಮಠದಲ್ಲಿ ಇಂದು ಸಂಜೆ 7.30ಕ್ಕೆ ಕಡೇ ಕಾರ್ತಿಕೋತ್ಸವ ನಡೆಯಲಿದೆ
ನಾಳೆ ಶ್ರೀ ಜಿಹ್ವೇಶ್ವರ ಸ್ವಾಮಿ ಕಾರ್ತಿಕ
ಶ್ರೀ ಜಿವ್ಹೇಶ್ವರ ಧ್ಯಾನ ಮಂದಿರದಲ್ಲಿ ಸ್ವಕುಳಸಾಳಿ ಸಮಾಜದ ಮಹಿಳಾ ಮಂಡಳಿ ವತಿಯಿಂದ ನಾಡಿದ್ದು ದಿನಾಂಕ 23ರ ಸೋಮವಾರ ಸಂಜೆ 5.30ಕ್ಕೆ ಶ್ರೀ ಜಿಹ್ವೇಶ್ವರ ಸ್ವಾಮಿಯ ಕಾರ್ತಿಕ ದೀಪೋತ್ಸವ ನಡೆಯಲಿದೆ.
ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದಿಂದ ದಿನದರ್ಶಿಕೆ
ನಗರದ ಅಶ್ವತ್ಥಪುರ ದೇಶಸ್ಥ ಬ್ರಾಹ್ಮಣ ಸಮಾಜದಿಂದ ಪ್ರಥಮ ಬಾರಿಗೆ 2025 ನೇ ಸಾಲಿನ ದಿನದರ್ಶಿಕೆಯನ್ನು ಬ್ರಹ್ಮ ಚೈತನ್ಯ ಮಂದಿರದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಎಸ್ . ಸುರೇಶ್ ಬಾಬುಬಿಡುಗಡೆಗೊಳಿಸಿದರು.