Tag: Ranebennur

Home Ranebennur

ಕಾಮಗಾರಿ ಮುಗಿಯುವವರೆಗೂ ಅನುದಾನ ನೀಡಬೇಡಿ

ರಾಣೇಬೆನ್ನೂರು : ನಗರದಲ್ಲಿ ಕೈಗೊಳ್ಳಲಾಗುತ್ತಿರುವ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ನೀರು ಶುದ್ಧೀಕರಣಕ್ಕಾಗಿ ಔಷಧ ಖರೀದಿಸಲು 49.90 ಲಕ್ಷ ರೂಪಾಯಿ ಆಡಳಿತಾತ್ಮಕ ಮಂಜೂರಾತಿ ನೀಡುವುದು ಸರಿಯಲ್ಲ

ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆ

ರಾಣೇಬೆನ್ನೂರು : ಹೆಚ್ಚುತ್ತಿರುವ ಆಧುನೀಕತೆ ಮತ್ತು ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆಯಾಗುತ್ತಿರು ವುದು  ಬಹಳಷ್ಟು ವಿಷಾದನೀಯ ಸಂಗತಿಯಾಗಿದೆ.

ಅಂಬಿಗರ ಚೌಡಯ್ಯ ಪೀಠದಲ್ಲಿ ಯುಗಾದಿ, ಅಂಬೇಡ್ಕರ್ ಜಯಂತಿ

ರಾಣೇಬೆನ್ನೂರು : ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದಿಂದ ಹಾವೇರಿ ಜಿಲ್ಲಾ ರಾಣೇಬೆನ್ನೂರು ತಾಲ್ಲೂಕು ಶ್ರೀ ಅಂಬಿಗರ ಚೌಡಯ್ಯ ಗುರು ಪೀಠದಲ್ಲಿ ಪ್ಲವ ನಾಮ ಸಂವತ್ಸರದ ಚಾಂದ್ರಮಾನ ಯುಗಾದಿ ಹಾಗೂ ಭಾರತ ರತ್ನ, ಸಂವಿಧಾನಶಿಲ್ಪಿ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಆಚರಿಸಲಾಯಿತು.

ಹಾವೇರಿ ಜಿಲ್ಲಾ ಕಸಾಪ ಚುನಾವಣೆ: ಅಖಾಡದಲ್ಲಿ ನಾಲ್ವರು

ರಾಣೇಬೆನ್ನೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದವರಲ್ಲಿ ನಿನ್ನೆ ನಾಲ್ವರು ವಾಪಸ್ ಪಡೆದಿದ್ದು, ಅಂತಿಮವಾಗಿ ಅಖಾಡದಲ್ಲಿ 4 ಜನ ನುಡಿ ಸೇವಕರು ಉಳಿದಿದ್ದಾರೆ.

ಡಾ. ಬಸವರಾಜ ಕೇಲಗಾರ ವಾಯವ್ಯ ಸಾರಿಗೆ ಉಪಾಧ್ಯಕ್ಷ

ರಾಣೇಬೆನ್ನೂರು : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಮಂಡಳಿ ಉಪಾಧ್ಯಕ್ಷರನ್ನಾಗಿ ರಾಣೇಬೆನ್ನೂರಿನ ಬಿಜೆಪಿ ಮುಖಂಡ ಡಾ. ಬಸವರಾಜ ಕೇಲಗಾರ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಎಸ್ಮಾ ಜಾರಿ ಸಮಸ್ಯೆಗೆ ಪರಿಹಾರವಲ್ಲ: ರೈತ ಸಂಘ

ರಾಣೇಬೆನ್ನೂರು : ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ, ಬಲ ಪ್ರಯೋಗ, ಚಂದ್ರಶೇಖರ ಮೇಲೆ ಆಪಾದನೆ ಇದು ಪರಿಹಾರವಲ್ಲ. ಸರ್ಕಾರ ಈ ನೀತಿಯನ್ನು ಕೈಬಿಟ್ಟು ರಾಜ್ಯ ಸಾರಿಗೆ ನೌಕರರ  ಬೇಡಿಕೆಗಳನ್ನು ಪೂರೈಸುವಲ್ಲಿ ಚಿಂತಿಸಬೇಕು ಎಂದು ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಭುವನೇಶ್ವರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪ್ರೇಮಿಯ ಹುಟ್ಟುಹಬ್ಬ

ರಾಣೇಬೆನ್ನೂರು : ನಗರದ ವಿವೇಕಾನಂದ ಗ್ರಾಮೀಣ ವಿದ್ಯಾಸಂಸ್ಥೆ  ಅಧ್ಯಕ್ಷರು ಮತ್ತು ಹಾವೇರಿ ಜಿಲ್ಲೆಯ ಸಾವಿತ್ರ ಬಾ ಪುಲೆ ಎಂದೇ ಹೆಸರಾದ ಶಿಕ್ಷಣ ಪ್ರೇಮಿ, ಪಿಂಚಣಿ ಹಣದಲ್ಲಿ ಭುವನೇಶ್ವರಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪಿಸಿ ಬಡ ವಿದ್ಯಾರ್ಥಿಗಳ ಪಾಲಿಗೆ ಬೆಳಕಾದ  ಪುಟ್ಟಮ್ಮ ಬಸಯ್ಯ ಹಿರೇಮಠ ಅವರ ಹುಟ್ಟಿದ ಹಬ್ಬ ಆಚರಿಸಲಾಯಿತು.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ದ್ವಿಚಕ್ರ ವಾಹನ

ರಾಣೇಬೆನ್ನೂರು : ನನ್ನ ಕ್ಷೇತ್ರದಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಾಗಬೇಕು. ಈ ಕ್ಷೇತ್ರ ಶಿಕ್ಷಣದಲ್ಲಿ ಮಾದರಿ ಆಗಬೇಕು ಎನ್ನುವ ಕನಸು ನನ್ನದಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ರಾಣೇಬೆನ್ನೂರು ತಾ.ಪಂ. ಕ್ಷೇತ್ರಗಳ ಸಂಖ್ಯೆ 23 ರಿಂದ 19 ಕ್ಕೆ ಇಳಿಕೆ

ರಾಣೇಬೆನ್ನೂರು ತಾಲ್ಲೂಕಿನಲ್ಲಿ ಮೊದಲಿದ್ದ 23 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿ 19 ಕ್ಷೇತ್ರಗಳನ್ನಾಗಿ ಮಾಡಲಾಗಿದ್ದು, ಪಂಚಾಯ್ತಿವಾರು ಗ್ರಾಮಗಳನ್ನು  ಕೆಳಗಿನಂತೆ ಸೇರಿಸಿ ಸರ್ಕಾರ ಗೆಜೆಟ್ ಹೊರಡಿಸಿದೆ.

ಗ್ರಾ.ಪಂ. ಚುನಾವಣೆ : 3 ಕಾಂಗ್ರೆಸ್, 2 ಬಿಜೆಪಿ, 1 ಅತಂತ್ರ

ರಾಣೇಬೆನ್ನೂರು : ಮೊನ್ನೆ ನಡೆದ ತಾಲ್ಲೂಕಿನ ಆರು ಗ್ರಾಮ ಪಂಚಾಯ್ತಿಗಳ ಚುನಾವಣೆಯ ಮತ ಎಣಿಕೆ ಇಂದು ಇಲ್ಲಿನ ರೋಟರಿ ಶಾಲೆಯಲ್ಲಿ ನಡೆದಿದ್ದು, ಮೂರು ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತರು, ಎರಡರಲ್ಲಿ ಬಿಜೆಪಿ ಬೆಂಬಲಿತರು ಆಡಳಿತ ಹಿಡಿದಿದ್ದು, ಒಂದು ಅತಂತ್ರ ಫಲಿತಾಂಶ ಬಂದಿದೆ.

ಮೇ 2 ರ ನಂತರ ಮುಖ್ಯಮಂತ್ರಿ ಬದಲಾವಣೆ : ಶಾಸಕ ಯತ್ನಾಳ್‌

ರಾಣೇಬೆನ್ನೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯದ ಎಲ್ಲ ಮಾಹಿತಿ ತರಿಸಿಕೊಂಡಿದ್ದಾರೆ. ಮೇ 2 ರ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ

error: Content is protected !!