Tag: Grama Panchayath

Home Grama Panchayath

ಗ್ರಾ.ಪಂ.ಗಳ ಮೀಸಲಾತಿ ಮರು ಪರಿಶೀಲನೆಗೆ ಆಗ್ರಹ

ತಾಲ್ಲೂಕಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಪುನರ್ ಪರಿಶೀಲಿಸಿ, ಮರು ನಿಗದಿ ಮಾಡದಿದ್ದರೆ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವುದಾಗಿ ಮೈಂಡ್ ಹಟರ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಆರ್.ಅರುಣಕುಮಾರ್ ಎಚ್ಚರಿಸಿದ್ದಾರೆ.

ಐದು ವರ್ಷದ ಗ್ರಾ.ಪಂ. ಆಡಳಿತಕ್ಕೆ 5 ದಿನಗಳ ತರಬೇತಿ

ಹೊನ್ನಾಳಿ : ಮಾಧ್ಯಮದಲ್ಲಿ ತಿಳಿದಂತೆ ಒಂದೆಡೆ 88 ವರ್ಷದ ವೃದ್ಧೆ ಪಂಚಾಯಿತಿ ಸದಸ್ಯೆ. ಆದರೆ ಸಮೀಪದ ಜಗಳೂರು ತಾಲ್ಲೂಕಿನ ಸೊಕ್ಕೆ  ಪಂಚಾಯ್ತಿಯಲ್ಲಿ ಅಮೇರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ಒಬ್ಬರು  ಬಂದು ಪಂಚಾಯ್ತಿ ಅಧ್ಯಕ್ಷೆ ಆಗುತ್ತಾರೆ

ಹುಲಿಕಟ್ಟೆ ಗ್ರಾ. ಪಂ.ಗೆ ಅಧ್ಯಕ್ಷರಾಗಿ ಜಯಮ್ಮ, ಉಪಾಧ್ಯಕ್ಷರಾಗಿ ರೇಖಾ

ತಾಲ್ಲೂಕಿನ ಹುಲಿಕಟ್ಟೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಕೆರೆಯಾಗಳಹಳ್ಳಿಯ ಜಯ್ಯಮ್ಮ ದಾದಾಪ್ಳರ ಹನುಮಪ್ಪ ಮತ್ತು ಉಪಾಧ್ಯಕ್ಷರಾಗಿ ಅದೇ ಗ್ರಾಮದ ರೇಖಾ ಬಿ.ಜಿ. ಬಸವರಾಜ್ ಆಯ್ಕೆಯಾಗಿದ್ದಾರೆ.

ಸಿರಿಗೆರೆ : 88ರ ವೃದ್ಧೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಸಿರಿಗೆರೆ : ಚಿಕ್ಕ ಎಮ್ಮಿಗನೂರು ಗ್ರಾಮದ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ 88 ವರ್ಷದ ದಾಕ್ಷಾಯಣಮ್ಮ ಆಯ್ಕೆಯಾಗಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಗ್ರಾ.ಪಂ. ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ಚಳ್ಳಕೆರೆ : ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ.

ಹಾಲಿವಾಣ ಗ್ರಾ.ಪಂ. ಅಧ್ಯಕ್ಷರಾಗಿ ರಂಗನಾಥ್, ಉಪಾಧ್ಯಕ್ಷರಾಗಿ ಅಂಜಿತಾ ಸಂತೋಷ್‌ಕುಮಾರ್

ಮಲೇಬೆನ್ನೂರು : ಹಾಲಿವಾಣ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕೊಮಾರನಹಳ್ಳಿಯ ಐ.ಪಿ. ರಂಗನಾಥ್ ಮತ್ತು ಉಪಾಧ್ಯಕ್ಷರಾಗಿ ಹಾಲಿವಾಣದ ಶ್ರೀಮತಿ ಅಂಜಿತಾ ಸಂತೋಷ್‌ಕುಮಾರ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಬಾಗಳಿ ಗ್ರಾ. ಪಂ.ಅಧ್ಯಕ್ಷರಾಗಿ ಕೋಡಿಹಳ್ಳಿ ಹನುಮಂತಪ್ಪ, ಉಪಾಧ್ಯಕ್ಷರಾಗಿ ಗೀತಮ್ಮ

ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕೋಡಿಹಳ್ಳಿ ಪಿ.ಹನುಮಂತಪ್ಪ, ಹಾಗೂ ಉಪಾಧ್ಯಕ್ಷರಾಗಿ ಗೀತಮ್ಮ ಆಯ್ಕೆಯಾಗಿದ್ದಾರೆ. 

ಎಳೆಹೊಳೆ ಗ್ರಾ.ಪಂ. ಅಧ್ಯಕ್ಷರಾಗಿ ವೀರೇಂದ್ರ, ಉಪಾಧ್ಯಕ್ಷರಾಗಿ ಶಾಂತಮ್ಮ

ಮಲೇಬೆನ್ನೂರು : ಎಳೆಹೊಳೆ ಗ್ರಾ.ಪಂ. ಅಧ್ಯಕ್ಷರಾಗಿ ಎ.ವೀರೇಂದ್ರ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಶಾಂತಮ್ಮ ಜಯದೇವಪ್ಪ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಕಂದನಕೋವಿ ಗ್ರಾ.ಪಂ. ಅಧ್ಯಕ್ಷರಾಗಿ ಗಾಯತ್ರಿ, ಉಪಾಧ್ಯಕ್ಷರಾಗಿ ಸಂಗನಬಸಪ್ಪ

ದಾವಣಗೆರೆ : ಕಂದನಕೋವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ಮುನಿಯನಾಯ್ಕ, ಉಪಾಧ್ಯಕ್ಷರಾಗಿ ಸಂಗನಬಸಪ್ಪ ಅವರುಗಳು ಆಯ್ಕೆಯಾಗಿದ್ದಾರೆ. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಕೊಟ್ರೇಶ್‌ ಅವರು ಚುನಾವಣಾಧಿಕಾರಿಯಾಗಿದ್ದರು.

ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ನೇತ್ರಾವತಿ, ಉಪಾಧ್ಯಕ್ಷರಾಗಿ ಚಂದ್ರಪ್ಪ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ನೇತ್ರಾವತಿ ಕೊಟ್ರೇಶ್ ಮತ್ತು ಉಪಾಧ್ಯಕ್ಷರಾಗಿ ಕೋಣನತಲೆ ಚಂದ್ರಪ್ಪ ಆಯ್ಕೆಯಾಗಿದ್ದಾರೆ.

ಜಿಲ್ಲೂರು ಗ್ರಾ.ಪಂ. ಅಧ್ಯಕ್ಷರಾಗಿ ಹೆಚ್.ಕೆ. ಹಾಲಪ್ಪ, ಉಪಾಧ್ಯಕ್ಷೆ ಲಕ್ಷ್ಮಿದೇವಿ

ನ್ಯಾಮತಿ ತಾಲ್ಲೂಕಿನ ಜಿಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಗಿ ಹೆಚ್.ಕೆ. ಹಾಲಪ್ಪ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಿದೇವಿ ಅವಿರೋಧ ವಾಗಿ ಆಯ್ಕೆಯಾಗಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮುಖಂಡ ಡಿ. ರಾಜಪ್ಪ ಹಾಗೂ ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.

error: Content is protected !!