ಭಾನುವಾರ ಲಾಕ್‌ಡೌನ್‌ !

ಮಾನ್ಯರೇ,

ಭಾನುವಾರ ರಾಜ್ಯಪೂರ್ತಿ ಲಾಕ್‌ಡೌನನ್ನು ಸರ್ಕಾರ ಘೋಷಣೆ ಮಾಡಿದೆ. ಇದು ಎಷ್ಟರ ಮಟ್ಟಿಗೆ ಸರಿ, ಇದರ ಪ್ರಕಾರ ಸೋಮವಾರದಿಂದ ಶನಿವಾರದ ತನಕ ಕೊರೊನಾ ಮಲಗಿರುತ್ತದೆ. ಭಾನುವಾರ ಮಾತ್ರ ಎದ್ದು ಒಡಾಡುತ್ತೆ ಅಂತಾನ !

ರಾಜ್ಯದೆಲ್ಲೆಡೆ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರು ಹೆಚ್ಚುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕು. ನಮ್ಮ ಆರೋಗ್ಯದ ಬಗ್ಗೆ ನಾವೇ ಜಾಗೃತಿ ವಹಿಸಿ, ನಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಸರ್ಕಾರದ, ಆರೋಗ್ಯ ಸಂಸ್ಥೆಯ ನಿಯಮಗಳನ್ನು ಪಾಲಿಸಿ, ಎಚ್ಚರಿಕೆಯಿಂದ ನಡೆಯೋಣ.

– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.

error: Content is protected !!