ಮಾನ್ಯರೇ,
ನಗರದ 34ನೇ ವಾರ್ಡ್‌ಗೆ ಸೇರಿರುವ ಚಿಕ್ಕಮಣ್ಣಿ ದೇವರಾಜ ಅರಸು ಬಡಾವಣೆಯ ವೃತ್ತದ ಪಕ್ಕದಲ್ಲಿರುವ ಎರಡು ಉದ್ಯಾನವನಗಳು ನಿರ್ವಹಣೆಯಿಲ್ಲದ ಕಾರಣ ಗಿಡ-ಮರಗಳು ಒಣಗಿವೆ. ಕಸದ ರಾಶಿಯೇ ಬಿದ್ದಿದೆ. ಸಂಬಂಧಪಟ್ಟ ನಗರಪಾಲಿಕೆ ಆಡಳಿತಾಧಿಕಾರಿಗಳು ಇತ್ತ ಗಮನಹರಿಸಿ ಈ ಉದ್ಯಾನಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಕೋರುತ್ತೇನೆ.
ಪ್ರಕಾಶ್ ಹೆಚ್.ಬಿ, ವಾರ್ಡ್ ನಾಗರಿಕ.