ಮಾನ್ಯರೇ,
ಇತ್ತೀಚೆಗೆ ನಡೆದ ರಿಯಾಲಿಟಿ ಶೋ ಒಂದರಲ್ಲಿ, ನಟ ಬುಲೆಟ್ ರಕ್ಷಕ್ ಅವರು ನಾಡ ದೇವತೆ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯ. ಇದರಿಂದ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ಆಗಿರುವುದಂತೂ ನಿಜ. ಇವರ ಮಾತಿಗೆ ಅಲ್ಲಿರುವ ಜಡ್ಜ್ ಗಳು ಕೂಡ ಬಿದ್ದು ಬಿದ್ದು ನಗ್ತಾರೆ ಎಂದರೆ, ಅವರು ಏನು ಹೇಳಿದ್ದಾರೆಂದು ಕೇಳಿಸಿಕೊಳ್ಳದಷ್ಟು, ಸ್ವ-ನಿಯಂತ್ರಣದಲ್ಲಿಲ್ಲ ಎಂದರ್ಥ.
ಇತ್ತೀಚಿನ ವರ್ಷಗಳಲ್ಲಿ ರಿಯಾಲಿಟಿ ಶೋ ಎಂದರೆ ರಿಯಲ್ ಇಲ್ಲದ ಶೋ, ಬರೀ ರೀಲ್ ಶೋ, ಕೇವಲ ಟಿಆರ್‌ಪಿಗೋಸ್ಕರ ನಡೆಸುವ ಶೋಗಳೇ ಹೊರತು, ಇದರಲ್ಲಿ ಯಾವುದೇ ಸಾಮಾಜಿಕ ಕಳಕಳಿ, ಜವಾಬ್ದಾರಿ, ಸಮಾಜಕ್ಕೆ ಯಾವುದೇ ರೀತಿಯ ಸಂದೇಶವೇ ಇರುವುದಿಲ್ಲ. ಇನ್ನೂ ಕಾಮಿಡಿ ಶೋಗಳಲ್ಲಿ ಹಾಸ್ಯ ಭರಿತ ಅಶ್ಲೀಲ ಪದಗಳೇ ತುಂಬಿರುತ್ತವೆ. ಇಂತಹ ಕಾರ್ಯಕ್ರಮಗಳನ್ನು ಕುಟುಂಬ ಸದಸ್ಯರೊಂದಿಗೆ ಕುಳಿತು ನೋಡಲು ಮುಜುಗರವಾಗುತ್ತದೆ. ಸದಾ ಒಂದಿಲ್ಲೊಂದು ವಿವಾದಗಳನ್ನೇ ಸೃಷ್ಟಿಸುತ್ತಿರುವ ಇಂತಹ ರಿಯಾಲಿಟಿ ಶೋಗಳು ನಮಗೆ ಬೇಕಾ?
ಮುರುಗೇಶ ಡಿ, ದಾವಣಗೆರೆ.