ಮಾನ್ಯರೇ,
ದಾವಣಗೆರೆ ನಗರಕ್ಕೆ ಲೋಕಿಕೆರೆ ರಸ್ತೆಯ ಮೂಲಕ ಹದಡಿ ರಸ್ತೆಗೆ ಪ್ರವೇಶಿಸುವಾಗ ಗ್ರಾಹಕರ ನ್ಯಾಯಾಲಯದ ಎದುರಿಗೆ ಕಾಣುವ ಹಾಗೇ ಪ್ರತಿನಿತ್ಯ ಕಸದ ರಾಶಿ ಇರುತ್ತದೆ. ಹಾಗೇ ಮುಂದೆ ಸಾಗಿದರೆ ರಸ್ತೆಯಲ್ಲಿ ಡಾಂಬರು ಕಿತ್ತು ಹಳ್ಳಗಳಾಗಿವೆ. ಸ್ಮಾರ್ಟ್ ಸಿಟಿ ದಾವಣಗೆರೆ ನಗರದ ಒಳ ಪ್ರವೇಶಿಸುವ ಜನಗಳಿಗೆ ಕಸದ ರಾಶಿಯು ಮತ್ತು ಕಿತ್ತು ಹೋದ ಡಾಂಬರು ರಸ್ತೆಯ ಧೂಳು ಸ್ವಾಗತ ಕೋರುತ್ತದೆ.
ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಡಾಂಬರು ಹಾಕಿಸಿ, ಕಾಣ ಸಿಗುವ ಕಸದ ರಾಶಿಯನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡು, ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಪಕ್ಕದಲ್ಲೇ ಕಾಣ ಸಿಗುವ ಟಿ.ವಿ. ಸ್ಟೇಷನ್ ಕೆರೆಯ ಸೊಬಗನ್ನು ಹೆಚ್ಚಿಸುವಂತೆ ಮಾಡಲು ಸಾರ್ವಜನಿಕರ ಪರವಾಗಿ ಮನವಿ.
–ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.