ನಿಲ್ದಾಣದಲ್ಲಿ ಊರುಗಳ ಹೆಸರು ಸರಿಪಡಿಸಿ

ನಿಲ್ದಾಣದಲ್ಲಿ ಊರುಗಳ ಹೆಸರು ಸರಿಪಡಿಸಿ

ಮಾನ್ಯರೇ,

ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ  ಕಂಡುಬರುವ ಬಸ್ಸುಗಳು ಹೊರಡುವ ಸಮಯದ ಪ್ರದರ್ಶನ ಫಲಕದಲ್ಲಿ ಕೆಲ ಊರುಗಳ ಹೆಸರುಗಳಲ್ಲಿ ಅಕ್ಷರ ಲೋಪಗಳು ಎದ್ದು ಕಾಣುತ್ತಿವೆ. ಅವುಗಳಲ್ಲಿ ಅಣಜಿ ಬದಲಿಗೆ ಅನಾಜಿ, ಬಿಳಚೋಡು ಬದಲಿಗೆ ಬಿಲಚೋಡು ಎಂದು, ಅತ್ತಿಗೇರಿ, ಬಡ, ಕೆಂಚಿಕೇರಿ, ಬೆಂಡಿಗೆರೆ, ಮಳಲೀಕೆರೆ ಎಂಬಂತಹ ಊರುಗಳ ಹೆಸರುಗಳು ಅಕ್ಷರಲೋಪದಿಂದ  ಪ್ರದರ್ಶನ ಗೊಳ್ಳುತ್ತಿವೆ. ಆದರೆ ಇಂಗ್ಲೀಷ್ ನಲ್ಲಿ ಕಂಚಿಕೆರೆ ಎಂಬ ಹೆಸರನ್ನು ಬಿಟ್ಟರೆ ಬಹುತೇಕ ಎಲ್ಲವೂ ಸರಿಯಾಗಿಯೇ ಇವೆ. ದಿನನಿತ್ಯ ಮಾತನಾಡುವ ಮಾತೃಭಾಷೆಯ  ಪದಗಳೇ  ಯಾಕಿಷ್ಟು ದೋಷದಿಂದ ಕೂಡಿವೆ ಎಂಬುದೇ ಗೊತ್ತಾಗುತ್ತಿಲ್ಲ. 

ಕಳೆದ ತಿಂಗಳು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗಲೂ ಇದೇ ರೀತಿಯ ಲೋಪಗಳು ಇದ್ದವು. ಏನೋ ಕಣ್ ತಪ್ಪಿನಿಂದ ಲೋಪವಾಗಿರಬಹುದು, ಇಂದಲ್ಲಾ, ನಾಳೆ ಸರಿಪಡಿಸಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಿನ್ನೆ ಭೇಟಿ ನೀಡಿದಾಗ ಆ ಹೆಸರುಗಳು ಇವತ್ತಿಗೂ ಕೂಡ ಅಕ್ಷರ ಲೋಪದಿಂದ  ಪ್ರದರ್ಶನಗೊಳ್ಳುತ್ತಿದ್ದು ಇಷ್ಟು ದಿವಸ ಯಾರ ಕಣ್ಣಿಗೂ ಕಾಣಿಸದಿರುವುದು  ನಿಜಕ್ಕೂ ಬೇಸರ ತರಿಸಿತು. 

-ಮುರುಗೇಶ ಡಿ.,  ದಾವಣಗೆರೆ.

error: Content is protected !!