ಮಾನ್ಯರೇ,
ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ 9ನೇ ಅಡ್ಡ ರಸ್ತೆ ಡಾಂಬರ್ ರಸ್ತೆ ಆಗಿದ್ದರಿಂದ ವಾಹನ ಸವಾರರು ಆಂಜನೇಯ ಬಡಾವಣೆ ಹಾಗೂ ಬಿಐಇಟಿ ರಸ್ತೆಯಿಂದ ರಭಸವಾಗಿ ಸಂಚರಿಸುತ್ತಿದ್ದರಿಂದ ಇಲ್ಲಿನ ನಿವಾಸಿಗಳು ತೊಂದರೆಗೀಡಾಗಿದ್ದಾರೆ.
ವೇಗವಾಗಿ ಸಂಚರಿಸುವ ವಾಹನ ಸವಾರರಿಂದ ವೃದ್ಧರು, ಶಾಲಾ- ಕಾಲೇಜಿನ ಮಕ್ಕಳು ಹಾಗೂ ಮಹಿಳೆಯರಿಗೆ ತೀವ್ರ ತೊಂದರೆ ಆಗುತ್ತಿದೆ ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಗೆ ಸ್ಪೀಡ್ ಬ್ರೇಕರ್ (ಹಂಪ್ಸ್) ಹಾಕಿ ಸ್ಥಳೀಯರ ಸಮಸ್ಯೆಗೆ ಸ್ಪಂದಿಸಿ.
– ರಘುನಾಥರಾವ್ ತಾಪ್ಸೆ, ನಿವೃತ್ತ ಬ್ಯಾಂಕ್ ಅಧಿಕಾರಿ.