ಬಾ ಗುರು, ಅಪ್ಡೇಟ್ ಆಗು !

ಮಾನ್ಯರೇ, 

ನಮ್ಮ ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದಂತೆ ಪ್ರತಿದಿನ ದಾವಣಗೆರೆ ಜಿಲ್ಲಾ ಪೊಲೀಸ್ ಇವರಿಂದ ನಿಖರವಾದ ಮಾಹಿತಿಯನ್ನು ಪಡೆಯುವ ವ್ಯವಸ್ಥೆಯು ಉಚಿತವಾಗಿ ಇದೆ ಎಂಬ ಮಾಹಿತಿಯು ಹೆಚ್ಚಿನ ಜನಗಳಿಗೆ ತಿಳಿದಿರುವುದಿಲ್ಲ. ಇದರ ಸಂಬಂಧಿತವಾಗಿ ಮಾಹಿತಿಯನ್ನು ಪಡೆಯುವ ಬಗೆ ಇಲ್ಲಿದೆ.

ವ್ಯಾಟ್ಸಾಪ್ ಬಳಕೆದಾರರು ತಮ್ಮ ಸ್ಮಾರ್ಟ್ ಮೊಬೈಲ್ ಮೂಲಕ ಅಪ್‌ಡೇಟ್ ಮಾಡಿಕೊಂಡಿರುವ ವ್ಯಾಟ್ಸಾಪ್ ತೆರೆದು Channels ಎಂಬ ವಿಭಾಗವನ್ನು ಹುಡುಕಬೇಕು. ಅಲ್ಲಿ ಕಾಣ ಸಿಗುವ Explore ಎಂಬುದರ ಮೇಲೆ ಒತ್ತಿದಾಗ ಒಂದಿಷ್ಟು ಚಾನೆಲ್ ವಾಹಿನಿಗಳು ಕಾಣಿಸುತ್ತವೆ. ಅಲ್ಲಿ
Davanagere District Police ಎಂದು ಬರೆದು ಸರ್ಚ್ ಮಾಡಿ. ಆಗ ದಾವಣಗೆರೆ ಜಿಲ್ಲಾ ಪೊಲೀಸ್ ವಾಹಿನಿಯು ಕಾಣುತ್ತದೆ. Follow ಕೊಟ್ಟರೆ ಆ ವಾಹಿನಿಯಲ್ಲಿ ವಿಚಾರಗಳು ಪ್ರಕಟಗೊಂಡಾಗ ತಮಗೆ ನೋಟಿಫಿಕೇಶನ್ ಲಭ್ಯ ಆಗುತ್ತವೆ.

ಇಲ್ಲಿಯವರೆಗೂ ಕೇವಲ 800+ ಮಂದಿ ಫಾಲೋ ಮಾಡಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ವಾಹಿನಿಯನ್ನು ಫಾಲೋ ಮಾಡಿದ್ದೇ ಆದಲ್ಲಿ ಪೊಲೀಸ್‌ರಿಂದ ಸಿಗುವ ಮುನ್ನೆಚ್ಚರಿಕೆಗಳು, ಅಗತ್ಯವಾದ ಮಾಹಿತಿಗಳು ಸುಲಭವಾಗಿ ಸಾರ್ವಜನಿಕರಿಗೆ ತಲುಪುತ್ತವೆ.

ಸಾರ್ವಜನಿಕರಿಗೆ ತಲುಪಲೆಂದೇ ಈ ವೇದಿಕೆ ಆರಂಭಗೊಂಡಿದ್ದರಿಂದ ದಾವಣಗೆರೆ ಜನತೆಯು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉತ್ತಮವಾದ ಈ ಡಿಜಿಟಲ್ ವಾಹಿನಿಯನ್ನು ಅಬಿವೃದ್ಧಿ ಪಡಿಸುತ್ತಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವಿಭಾಗಕ್ಕೆ ಸಾರ್ವಜನಿಕರ ಪರವಾಗಿ  ಅಭಿನಂದನೆಗಳು.

– ವೈ. ವಾದಿರಾಜ ಭಟ್,  ವಕೀಲರು, ದಾವಣಗೆರೆ.

error: Content is protected !!