ಗಣಪತಿ ಹಬ್ಬವನ್ನು ಸುಸಂಸ್ಕೃತವಾಗಿ ಆಚರಿಸೋಣ

ಮಾನ್ಯರೇ,

ಬರುವ ಗಣಪತಿ ಹಬ್ಬವನ್ನು ಸಂಸ್ಕೃತಿ, ಸಂಸ್ಕಾರದಿಂದ ಆಚರಿಸುವ ಮೂಲಕ ಧರ್ಮ ರಕ್ಷಣೆ ಮಾಡಬೇಕಿದೆ. ಗಣಪತಿ ಪ್ರತಿಷ್ಟಾಪನೆ ಮಾಡುವಾಗ ಮತ್ತು ವಿಸರ್ಜನೆ ಸಮಯದಲ್ಲಿ ಭಕ್ತಿ ಗೀತೆ, ದೇಶ ಭಕ್ತಿ ಗೀತೆ ಹಾಡುಗಳನ್ನು ಪ್ರಸಾರಗೊಳಿಸಿ ಕುಣಿಯಬೇಕು. ಇಂದಿನ ದಿನಮಾನದಲ್ಲಿ ಯುವಕರು ಸಾರಾಯಿ, ಗುಟ್ಕಾ, ಬೀಡಿ ಹಾಗೂ ಸಿಗರೇಟು ಸೇದುವ ಮೂಲಕ ಹಬ್ಬ ಆಚರಣೆ ಮಾಡಿದರೇ ಹಿಂದೂ ಧರ್ಮಕ್ಕೆ ಅವಮಾನ ಮಾಡಿದಂತಾಗುತ್ತದೆ. ಜಗತ್ತಿನಲ್ಲಿ ಹಿಂದೂಗಳಿಗಾಗಿ ಇರುವ ಏಕೈಕ ದೇಶವೇ ಭಾರತ. ಆದ್ದರಿಂದ ನಮ್ಮ ದೇಶ ಹಾಗೂ ಧರ್ಮದ ಸಂಸ್ಕೃತಿ ಕಾಪಾಡಿ ಕೊಳ್ಳುವ ಮೂಲಕ ಸುಸಂಸ್ಕೃತವಾಗಿ ಗಣಪತಿ ಹಬ್ಬ ಆಚರಿಸೋಣ.

– ಜೆಂಬಿಗಿ ಮೃತ್ಯುಂಜಯ, ಕನ್ನಡ ಉಪನ್ಯಾಸಕರು, ದಾವಣಗೆರೆ

error: Content is protected !!