ಮಾನ್ಯರೇ,
ದಾವಣಗೆರೆ ನಗರದಲ್ಲಿ ಇರುವ ತಹಶೀಲ್ದಾರ್ ಕಚೇರಿಯ ಇಡೀ ಕಟ್ಟಡವನ್ನು ಕಂಡಾಗ ತುಂಬಾ ಭಯವನ್ನುಂಟು ಮಾಡುತ್ತದೆ. ಈ ಕಟ್ಟಡವು ಶಿಥಿಲಗೊಂಡು ಇದರ ಕೆಲವು ಭಾಗಗಳು ಯಾವುದೇ ಕ್ಷಣದಲ್ಲಿ ಬಿದ್ದರೂ ಅಚ್ಚರಿ ಇಲ್ಲ ಎಂಬಂತೆ ಇವೆ.
ನಿತ್ಯ ಸಾವಿರಾರು ಜನರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು, ದಾಖಲೆಗಳನ್ನು ಪಡೆದುಕೊಳ್ಳಲು ಬರುತ್ತಿರುತ್ತಾರೆ. ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಾಣಸಿಗುವುದು ಹಳ್ಳಿಯ ಜನಗಳೇ. ಅವರವರ ಚಿಂತೆಗಳಲ್ಲಿ ಬಂದಿರುವಾಗ ಈ ಕಟ್ಟಡವು ನಕಾರಾತ್ಮಕ ಅಂಶವನ್ನು ಉಣಬಡಿಸುತ್ತದೆ.
ಈಗಾಗಲೇ ನಗರದ ಪ್ರಧಾನ ಅಂಚೆ ಕಚೇರಿಯ ಮುಂದೆ ಹೊಸದಾಗಿ ನಿರ್ಮಾಣಗೊಂಡ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿಯು ವರ್ಗಾವಣೆಗೊಳ್ಳಲಿದೆ ಎಂಬ ಸುದ್ದಿಯು ವರ್ಷದಿಂದ ಕೇಳಿ ಬರುತ್ತಿದೆ. ಆದರೆ ಇಂದಿಗೂ ವರ್ಗಾವಣೆಗೊಂಡಿಲ್ಲ. ಯಾರ ಅನುಮತಿಗಾಗಿ ಕಾಯುತ್ತಿದ್ದಾರೆ? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಈಗ ಇರುವ ಕಟ್ಟಡವು ಅಪಾಯದ ಮುನ್ಸೂಚನೆ ನೀಡಿದೆ. ಯಾರಿಗೂ ಅನಾಹುತ ಆಗದಂತೆ, ಅಪಾಯ ಆಗದೇ ಇರುವ ಹಾಗೇ ಶೀಘ್ರವಾಗಿ ವರ್ಗಾವಣೆಯಾಗಲಿ ಎಂದು ನಗರದ ಸಾರ್ವಜನಿಕರ ಪರವಾಗಿ ವಿನಂತಿ.
– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.