ಮಾನ್ಯರೇ,
ಮೇ 18ರಂದು ಜನತಾವಾಣಿ ಪತ್ರಿಕೆಯಲ್ಲಿ ಓದುಗರ ಪತ್ರದ ಮೂಲಕ `ರಸ್ತೆಯಲ್ಲಿರುವ ಹೊಂಡವನ್ನು ಮುಚ್ಚಿಸಿ’ ಎಂಬ ಶೀರ್ಷಿಕೆಯಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ಎ.ವಿ.ಕೆ. ಕಾಲೇಜು ರಸ್ತೆಯಲ್ಲಿ ಕಾಣಸಿಗುವ ರಸ್ತೆಯ ಗುಂಡಿಯನ್ನು ಇಂದಿಗೂ ಮುಚ್ಚಿಸದೇ ಹಾಗೇ ಬಿಟ್ಟಿರುವುದು ನಿಜಕ್ಕೂ ಆಕ್ರೋಶದ ವಿಚಾರವೇ ಸರಿ.
ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಎ.ವಿ.ಕೆ ರಸ್ತೆಯಲ್ಲಿ ಆಸ್ಪತ್ರೆ, ಕಾಲೇಜು ಮತ್ತು ಕೋರ್ಟ್ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಸಂಚರಿಸುವ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಗುಂಡಿಗಳನ್ನು ಮುಚ್ಚಿಸಲು ಪಾಲಿಕೆಗಿರುವ ಸಮಸ್ಯೆಯಾದರೂ ಏನು? ಸರಿ ಮಾಡಲು ಗುಂಡಿ ಇನ್ನೆಷ್ಟು ಆಳಕ್ಕೆ ಹೋಗಬೇಕು? ಮತ್ತು ಯಾರಾದರೂ ಬಿದ್ದು ಅವಘಡ ಆದ ಮೇಲೆಯೇ ಗುಂಡಿ ಮುಚ್ಚಲು ಮುಂದಾಗುತ್ತೀರಾ..?
ಪಾಲಿಕೆಯಿಂದ 1 ಕಿ.ಮೀ. ಅಂತರವೂ ಇಲ್ಲದ ರಸ್ತೆಯಲ್ಲಿ ಇರುವ ಗುಂಡಿಯು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕಾಣದೇ ಇರುವುದು ಬೇಸರ ತಂದಿದೆ.
ಶೀಘ್ರವಾಗಿ ಮಹಾನಗರ ಪಾಲಿಕೆ ವಲಯದಲ್ಲಿರುವ ರಸ್ತೆಗಳಲ್ಲಿ ಕಾಣಸಿಗುವ ಗುಂಡಿಗಳನ್ನು ಈ ಕೂಡಲೇ ಮುಚ್ಚಿಸಬೇಕು.
– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.