ಪಾನ್ – ಆಧಾರ್‌ ಲಿಂಕ್‌ಗೆ ತಾಂತ್ರಿಕ ದೋಷ

ಮಾನ್ಯರೇ,

ಪಾನ್ ಕಾರ್ಡ್ ನೊಂದಿಗೆ ಆಧಾರ ಕಾರ್ಡ್ ಲಿಂಕ್ ಮಾಡುವ ಪ್ರಯತ್ನದಲ್ಲಿ  ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ  ಜೀವ  ಹೈರಾಣ ಮಾಡಿಕೊಳ್ಳುತ್ತಿದ್ದಾರೆ.  ಲಿಂಕ್ ಮಾಡಿಸಲು ಒಂದು ಸಾವಿರ ರೂಪಾಯಿ ಶುಲ್ಕ ನೀಡಿದರೂ ಜನ್ಮ ದಿನಾಂಕದಲ್ಲಿನ  ಲೋಪದೋಷಗಳು  ಸರಿಹೋಗುತ್ತಿಲ್ಲ. ಬಡವರಿಗೆ ಇದು ಹೊರೆಯಾದರೂ, ಸರ್ಕಾರದ  ಆದೇಶದನ್ವಯ   ಲಿಂಕ್ ಮಾಡಿಸಲೇಬೇಕಾಗಿದೆ. 

ಸರ್ಕಾರವು ಜನ್ಮ ದಿನಾಂಕದ  ತಾಂತ್ರಿಕ ನಮೂನೆ ಯನ್ನು (softmode) ಬದಲಾಯಿಸಿ, ಚುನಾವಣೆ ಸಮಯದಲ್ಲಿ ಬ್ಯಾಂಕ್ ಖಾತೆದಾರರಿಗೆ  ಕಿರಿಕಿರಿ ಮಾಡಿ, ಅಲೆದಾಡುವಂತೆ  ಮಾಡಿದೆ.  ಹೀಗೆ ಮಾಡಿದರೆ  ಬ್ಯಾಂಕ್ ಖಾತೆದಾರನು  ಸರ್ಕಾ ರದ  ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸ ಹಾಗೂ  ಗೌರವ ಭಾವನೆಗಳಿಗೆ ಚ್ಯುತಿ ಮತ್ತು ಧಕ್ಕೆ ಬಂದಂತೆ  ಆಗುವುದಿಲ್ಲವೇ ?


– ಜೆ.ಎಸ್. ಚಂದ್ರನಾಥ, ನೀಲಾನಹಳ್ಳಿ. 

error: Content is protected !!