ರಾನೇಬೆನ್ನೂರಿನಲ್ಲಿ ಫುಟ್‌ಬಾಲ್ ಪಂದ್ಯಾವಳಿ
ರಾಣೇಬೆನ್ನೂರು, ಫೆ. 23 – ಭಾರತ ಸರ್ಕಾರದ ಯುವ ಜನ ಸೇವಾ ಕ್ರೀಡಾ ಇಲಾಖೆ ಇವರ ಸಹ ಭಾಗಿತ್ವದಲ್ಲಿ ಹಾವೇರಿ ಜಿಲ್ಲಾ ಪುಟ್ ಬಾಲ್ ಅಸೋಸಿಯೇಷನ್ ವತಿ ಯಿಂದ ರಾಣೇಬೆನ್ನೂರಿನಲ್ಲಿ ಈಚೆಗೆ 15 ವರ್ಷದೊಳಗಿನವರ ಖೇಲೋ ಇಂಡಿಯಾ ಫುಟ್‌ಬಾಲ್ ಪಂದ್ಯಾವಳಿಗಳು ಅದ್ಧೂರಿಯಾಗಿ ನಡೆದವು.
ಕ್ರೀಡಾ ಕೂಟದಲ್ಲಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನದೊಂದಿಗೆ ಅಂತಿಮ ಪಂದ್ಯಾವಳಿಯಲ್ಲಿ ಲಿಬರ್ಟಿ ಶಿವಮೊಗ್ಗ ತಂಡವನ್ನು 3-1 ಗೋಲುಗಳಿಂದ ಪರಾಭವಗೊಳಿಸಿ 50 ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.