ಆತ್ಮವಿಶ್ವಾಸ ಮತ್ತು ಲವಲವಿಕೆಗೆ ಕೂದಲು ಕಸಿ ಚಿಕಿತ್ಸೆ…

ಆತ್ಮವಿಶ್ವಾಸ ಮತ್ತು ಲವಲವಿಕೆಗೆ ಕೂದಲು ಕಸಿ ಚಿಕಿತ್ಸೆ…

ಕೂದಲು ನಿಮ್ಮ ದೈಹಿಕ ನೋಟವನ್ನು ಸುಧಾರಿಸುವುದರ ಜೊತೆಗೆ, ಉತ್ತಮ ಆರೋಗ್ಯಕರ ಕೂದಲನ್ನು ಹೊಂದುವುದು ನಿಮಗೆ ಹೆಚ್ಚು ಆತ್ಮವಿಶ್ವಾಸ ಮತ್ತು ಲವಲವಿಕೆಯನ್ನು ನೀಡುತ್ತದೆ. ಆದರೆ, ನೀವು ಇದ್ದಕ್ಕಿದ್ದಂತೆ ನಿಮ್ಮ ಅಮೂಲ್ಯವಾದ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದರೆ ಏನು ಮಾಡಬೇಕು ?

ಪುರುಷರು ಹಾಗೂ ಮಹಿಳೆಯರಲ್ಲಿ ಕೂದಲು ಖಂಡಿತವಾಗಿಯೂ ದೇಹದ ಪ್ರಮುಖ ಭಾಗವಾಗಿದೆ. ಏಕೆಂದರೆ ಕೂದಲು ನಿಮ್ಮ ದೈಹಿಕ ನೋಟವನ್ನು ಸುಧಾರಿಸುವುದರ ಜೊತೆಗೆ, ಉತ್ತಮ ಆರೋಗ್ಯಕರ ಕೂದಲನ್ನು ಹೊಂದುವುದು ನಿಮಗೆ ಹೆಚ್ಚು ಆತ್ಮವಿಶ್ವಾಸ ಮತ್ತು ಲವಲವಿಕೆಯನ್ನು ನೀಡುತ್ತದೆ. ಆದರೆ ನೀವು ಇದ್ದಕ್ಕಿದ್ದಂತೆ ನಿಮ್ಮ ಅಮೂಲ್ಯವಾದ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದರೆ ಏನು ಮಾಡಬೇಕು? ತೀವ್ರವಾದ ಕೂದಲು ಉದುರುವಿಕೆ ಅಥವಾ ಬೋಳು ಕಾರಣ ನಮ್ಮಲ್ಲಿ ಹಲವರು ಕೂದಲು ಕಸಿ ಮಾಡುವುದನ್ನು ಪರಿಗಣಿಸುತ್ತಾರೆ.

ಕೂದಲು ಕಸಿ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ವರದಿಯಲ್ಲಿದೆ, ಕೂದಲು ಕಸಿ ಎಂದರೇನು, ಇದಕ್ಕೆ ಯಾರು ಸೂಕ್ತರು, ಶಸ್ತ್ರಚಿಕಿತ್ಸೆ ವಿಧಾನ, ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಕೂದಲು ಕಸಿ ಎಂದರೇನು ?

ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅಂದರೆ ಎಲ್ಲಿ ಹೆಚ್ಚುವರಿ ಕೂದಲಿನ ಸಾಂದ್ರತೆಯನ್ನು ಬಯಸಲಾ ಗುತ್ತದೆಯೋ ಆ ಭಾಗಕ್ಕೆ ಕೂದಲನ್ನು ವರ್ಗಾಯಿಸುವ ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಕೂದ ಲನ್ನು ತಲೆಯ ಹಿಂಭಾಗದಿಂದ ಅಥವಾ ತಲೆಯ ಬದಿಗಳಿಂದ ಕೂದಲಿಲ್ಲದ ಜಾಗಕ್ಕೆ ವರ್ಗಾಯಿಸುವುದನ್ನು ಒಳಗೊಂಡಿರುತ್ತದೆ.

ಇದನ್ನು ಹೇಗೆ ಮಾಡಲಾಗುವುದು ?

ಈ ವಿಧಾನವನ್ನು ಸ್ಥಳೀಯ ಅರಿವಳಿಕೆಯ (Local anaesthesia) ಅಡಿಯಲ್ಲಿ ಮಾಡಲಾಗುವುದು, ಇದರಲ್ಲಿ ಪ್ರತ್ಯೇಕ ಕೂದಲು ಕೋಷಕ ಗುಂಪುಗಳನ್ನು (ಫಾಲಿಕ್ಯುಲರ್ ಘಟಕಗಳು) ಒಂದೊಂದಾಗಿ ಹೊರತೆಗೆದು, ಕೂದಲಿಲ್ಲದ ಭಾಗಕ್ಕೆ ಕಸಿ ಮಾಡಲಾಗುವುದು, ಈ ಶಸ್ತ್ರಚಿಕಿತ್ಸೆಯನ್ನು ವ್ಯಕ್ತಿಯ ಪರಿಸ್ಥಿತಿಗೆ ಅನುಗುಣವಾಗಿ ಕೂದಲಿನ ಸಾಂದ್ರತೆಯನ್ನು ಪಡೆಯುವವರೆಗೂ ಹಲವಾರು ಬಾರಿ ಮಾಡಬೇಕಾಗುವುದು,

ಈ ವಿಧಾನಕ್ಕೆ ಯಾರು ಸೂಕ್ತರು ?

* ಅನುವಂಶೀಯ ಕಾರಣದಿಂದ ಉಂಟಾದ ಬೊಕ್ಕು ತಲೆ

* ಸುಟ್ಟಗಾಯಗಳು ಮತ್ತು ಅಪಘಾತದಿಂದಾದ ಗಾಯಗಳ ಜಾಗದಲ್ಲಿ ಕೂದಲು ಉದುರುವಿಕೆ.

ಇದು ಶಾಶ್ವತವೇ ?

* ಕೂದಲ ಕಸಿಯ ನಂತರ ತಜ್ಞರ ಸಲಹೆಯನ್ನು ಪಾಲಿಸಿದರೆ ಕಸಿ ಮಾಡಿದ ಕೂದಲು ಶಾಶ್ವತವಾಗಿ ಉಳಿಯುತ್ತವೆ.

ಕೂದಲು ಉದುರುವಿಕೆ ಮಂದುವರೆಯುವುದೇ ?

ಕಸಿ ಮಾಡದೇ ಇರುವ ಜಾಗದಿಂದ ಕೂದಲು ಉದುರುವ ಸಾಧ್ಯತೆ ಇದೆ, ಇದೇ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಆದ ಮೇಲೆಯೂ ತಜ್ಞರು ನೀಡುವ ಸಲಹೆಯಂತೆ ಔಷಧಿಗಳನ್ನು ಬಳಸಿದ್ದಲ್ಲಿ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ, ಆದ್ದರಿಂದ ವೈದ್ಯರ ಸಲಹೆಯನ್ನು ಪಾಲನೆ ಮಾಡಬೇಕು.

* ಶಸ್ತ್ರಚಿಕಿತ್ಸೆ ಅಡ್ಡ ಪರಿಣಾಮಗಳೇನು ?

* ಶಸ್ತ್ರಚಿಕಿತ್ಸೆ ಮಾಡಿದ ಜಾಗದಲ್ಲಿ ಊತ, ನೋವು ಮತ್ತು ಕೆಂಪಾಗುವ ಸಾಧ್ಯತೆ ಇದೆ.

* ಕೆಲಸದಿಂದ ರಜೆ ತೆಗೆದುಕೊಳ್ಳುವ ಅವಶ್ಯಕತೆ ಬರುತ್ತದೆಯೇ ?

* ಇದು ವ್ಯಕ್ತಿಯಿಂದ ವ್ಯಕ್ತಿಗೆ ಪರಿಸ್ಥಿತಿಯ ಮೇಲೆ ಬದಲಾಗುತ್ತದೆ.

* ಶಸ್ತ್ರಚಿಕಿತ್ಸೆ ಆದಮೇಲೆ ಕನಿಷ್ಠ ಒಂದು ವಾರದವರೆಗೂ ಯಾವುದೇ ತರಹದ ಶ್ರಮದ ಕೆಲಸ ಮತ್ತು ಧೂಳಿನಲ್ಲಿ ಹೋಗುವುದನ್ನು ಮಾಡಬಾರದು.


– ಡಾ. ರಶ್ಮಿ ಎ.ಬಿ., ಡಾ ಅಕ್ಷಯ್ ಎಲ್.ಎಂ., ಸೀನಿಯರ್ ರೆಸಿಡೆಂಟ್, ಚರ್ಮರೋಗ ವಿಭಾಗ, ಜೆಜೆಎಂ ಮೆಡಿಕಲ್ ಕಾಲೇಜ್, ದಾವಣಗೆರೆ,

error: Content is protected !!