ರಾಣೇಬೆನ್ನೂರು : ಮಂತ್ರಿಮಂಡಲದಲ್ಲಿ ಬಂಜಾರ ಸಮಾಜ ನಿರ್ಲಕ್ಷ್ಯ

ರಾಣೇಬೆನ್ನೂರು : ಮಂತ್ರಿಮಂಡಲದಲ್ಲಿ ಬಂಜಾರ ಸಮಾಜ ನಿರ್ಲಕ್ಷ್ಯ

ತೀವ್ರ ಅಸಮಾಧಾನ, ಹೋರಾಟದ ಸಿದ್ಧತೆ

ರಾಣೇಬೆನ್ನೂರು, ಮೇ 29- ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಬಂಜಾರ ಸಮಾಜದ ಏಕೈಕ ಶಾಸಕರಾದ ಹಾವೇರಿಯ ರುದ್ರಪ್ಪ ಲಮಾಣಿ ಅವರಿಗೆ ಮಂತ್ರಿಗಿರಿ ತಪ್ಪಿಸಿ, ಸಿದ್ದರಾಮಯ್ಯ ಸರ್ಕಾರ ಬಂಜಾರ ಸಮಾಜಕ್ಕೆ ಬಹಳಷ್ಟು ಅನ್ಯಾಯ ಮಾಡಿದೆ ಎಂದು ರಾಣೇಬೆನ್ನೂರು ತಾಲ್ಲೂಕು ಬಂಜಾರ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ನಾಯ್ಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರವಾಸಿ ಮಂದಿರದಲ್ಲಿ ಇಂದು ನಿವೃತ್ತ ನೌಕರರ ಜೊತೆಗೂಡಿ ಪತ್ರಿಕಾಗೋಷ್ಠಿ ನಡೆಸಿದರು. ಬರಲಿರುವ ಲೋಕಸಭೆ, ವಿಧಾನ ಪರಿಷತ್, ಜಿ.ಪಂ., ತಾ.ಪಂ. ಚುನಾವಣೆಗಳನ್ನು ಗಮನದಲ್ಲಿರಿಸಿಕೊಳ್ಳದೇ 40 ಲಕ್ಷದಷ್ಟು ಮತದಾರರಿರುವ ನಮ್ಮನ್ನು ಅಲಕ್ಷಿಸಿರುವುದು, ಜೊತೆಗೆ ಐದು ಜನ ಕಾಂಗ್ರೆಸ್ ಶಾಸಕರಿರುವ ಹಾವೇರಿ ಜಿಲ್ಲೆಯನ್ನೂ ಸಹ ಅಲಕ್ಷಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರೀ ಆಘಾತ ಮಾಡಬಹುದು ಎಂದು ರಾಮಣ್ಣ ಹೇಳಿದರು.

ಮುಂದೆ ಮಂತ್ರಿ ಮಂಡಲ ಪುನರ್‌ರಚಿಸುವ ಸಂದರ್ಭದಲ್ಲಿ ನಮ್ಮನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ನಮ್ಮ ಮನವಿ ತೀವ್ರ ಹೋರಾಟದತ್ತ ನಡೆಯಲಿದೆ ಎಂದು ಕೆಲವರು ಅಭಿಪ್ರಾಯಿಸಿದರು. ಓಬ್ಳಾನಾಯ್ಕ, ಮಹಾಂತೇಶ ಲಮಾಣಿ, ಜಿ.ಕೆ. ಲಮಾಣಿ, ಹನುಮಂತ ಲಮಾಣಿ, ಹಾಲೇಶ ಲಮಾಣಿ, ಲಂಬಾಣಿ ಸಂಘದ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಗೋಷ್ಠಿಯಲ್ಲಿದ್ದರು.

error: Content is protected !!