ಕೊಟ್ಟೂರು, ಮಾ. 14 – ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಭೀಮ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕೊಟ್ಟೂರು ತಾಲ್ಲೂಕು ಪಟ್ಟಣದಲ್ಲಿ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸದೃಢ ಹಾಗೂ ಸುರಕ್ಷತಾ ಕುಟುಂಬಕ್ಕಾಗಿ ಕಾಂಗ್ರೆಸ್ಸಿನ ಮೂರು ಗ್ಯಾರೆಂಟಿ ಕಾರ್ಡ್ ವಿತರಿಸಲಾಯಿತು. ಪಟ್ಟಣ ಪಂಚಾಯತಿ ಸದಸ್ಯ ಶೈಲಜಾ ರಾಜೀವ್ ಅವರು ಮನೆ ಮನೆಗೆ ತೆರಳಿ ಯೋಜನೆಗಳ ಬಗ್ಗೆ ಪ್ರತಿ ಸದಸ್ಯರಿಗೆ ತಿಳಿಸಿದರು.
ಕೊಟ್ಟೂರು : ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
