ಮತದಾನದ ಅರಿವು ಮೂಡಿಸಲು ಆಟೋ ಜಾಥಾ

ಮತದಾನದ ಅರಿವು ಮೂಡಿಸಲು ಆಟೋ ಜಾಥಾ

ಕೊಟ್ಟೂರು, ಏ. 10 – ಕೊಟ್ಟೂರು ವಿಧಾನಸಭಾ ಚುನಾವಣೆ ಅಂಗವಾಗಿ ಮತದಾನದ ಮಹತ್ವ ಮತ್ತು ಪ್ರಕ್ರಿಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಭಾರತ ಚುನಾವಣೆ ಆಯೋಗ ಸ್ವೀಪ್ ಸಮಿತಿಯ ಅಧಿಕಾರಿ ಶಶಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಂಯಕ್ತಾಶ್ರಯದಲ್ಲಿ ಸೋಮವಾರ ಸಂಜೆ ಪಟ್ಟಣ ಪಂಚಾಯ್ತಿಯ ಸಿಬ್ಬಂದಿಯೊಂದಿಗೆ ಆಟೋ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಹಾಗೂ ಸ್ವೀಪ್ ಕಮಿಟಿ ಅಧಿಕಾರಿ  ಆಟೋ ಮೂಲಕ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮತದಾನ ಜಾಗೃತಿ ಮೂಡಿಸುವ ಜಾಥಾವು ಪಟ್ಟಣ ಪಂಚಾಯಿತಿ ಯಿಂದ  ಮರಿಕೊಟ್ರೇಶ್ವರ ದೇವಸ್ಥಾನ, ಬಸ್‌ ಸ್ಟ್ಯಾಂಡ್ ಸರ್ಕಲ್, ಗಾಂಧಿ ಸರ್ಕಲ್ ವೃತ್ತ ಮಾರ್ಗವಾಗಿ ಜಾಥಾ ಕಾರ್ಯಕ್ರಮವು ಉಜ್ಜಿನಿ ಸರ್ಕಲ್‌ ತಲುಪಿತು.

ಜಾಥಾದಲ್ಲಿ ಮತದಾನದ ಅರಿವು ಕುರಿತು ಮಾಹಿತಿ ಸಾರುವ ಫಲಕಗಳಲ್ಲಿ 18 ವರ್ಷ ಪೂರೈಸಿದ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿ. ಮತದಾರರ ಪಟ್ಟಿಯ ಮಾಹಿತಿ ತಿದ್ದುಪಡಿಗಾಗಿ ನಮೂನೆ -8 ಬಳಸಿ, ಬಂದಿತು ಚುನಾವಣೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹೆಸರು ನೋಂದಾಯಿಸುವುದು ನಮ್ಮೆಲ್ಲರ ಹೊಣೆ, ನಿಮ್ಮ ಹೆಸರು ನೋಂದಾಯಿಸಲು ನಮೂನೆ – 6 ಬಳಸಿ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಚುನಾವಣೆ ಸಂಬಂಧಿತ  ಸಂದೇಹಗಳಿಗೆ 1950 ಮತದಾರರ ಸಹಾಯವಾಣಿಗೆ ಕರೆ ಮಾಡಿ, ಎಂಬ ಘೋಷ ವಾಕ್ಯಗಳು ವಿಶೇಷವಾಗಿ ಕಂಡುಬಂದವು.

error: Content is protected !!