ಹರಪನಹಳ್ಳಿ, ಮಾ. 7 – ತಾಲ್ಲೂಕಿನ ರಾಗಿಮಸಲವಾಡ ಗ್ರಾಮದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಸೋಮವಾರ ನಡೆದಿದ್ದು, ಒಟ್ಟು 79,940 ರೂ. ಹಣ ಸಂಗ್ರಹವಾಗಿದೆ ಎಂದು ಮುಜರಾಯಿ ಇಲಾಖೆ ಕಾರ್ಯ ನಿರ್ವಾಹಣಾಧಿಕಾರಿ ಮಲ್ಲಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶೇಖರಗೌಡ, ಮುಖಂಡರಾದ ಹೆಗ್ಗಪ್ಪರ ಶಂಭುಲಿಂಗಪ್ಪ, ಎಸ್.ಆರ್. ಚಿಕ್ಕನಗೌಡ, ಎಸ್.ಟಿ. ಮಂಜಪ್ಪ, ಸೊಕ್ಕೆ ರಮೇಶ, ಶೇಖರಪ್ಪ, ಎಸ್. ಚಂದ್ರಪ್ಪ, ಎಚ್. ಸೋಮಪ್ಪ, ಎ. ನಾಗರಾಜ, ಬಾಬಣ್ಣ, ರವಿಕುಮಾರ, ಸಿ. ಭೀಮಪ್ಪ, ಗೋವಿಂದಪ್ಪ, ಗುಮಾಸ್ಥರಾದ ನಾಗರಾಜ, ಗಂಗಾಧರ, ಚನ್ನಬಸವರಾಜ ಸೇರಿದಂತೆ ಇತರರು ಇದ್ದರು.
January 22, 2025