ಮಾದಕ ವಸ್ತುಗಳ ಸೇವನೆ ಸಮಾಜಕ್ಕೆ ದೊಡ್ಡ ಪಿಡುಗು

ಮಾದಕ ವಸ್ತುಗಳ ಸೇವನೆ ಸಮಾಜಕ್ಕೆ ದೊಡ್ಡ ಪಿಡುಗು

ಹರಪನಹಳ್ಳಿಯ ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ

ಹರಪನಹಳ್ಳಿ, ಮಾ.7- ಮಾದಕ ವಸ್ತುಗಳ ಸೇವನೆ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಗಂಡು, ಹೆಣ್ಣು, ಬಡವ, ಶ್ರೀಮಂತ ಎನ್ನುವ ಭೇದವಿಲ್ಲದೆ ಕಂಡುಬರುವ ಒಂದು ದೊಡ್ಡ ಪಿಡುಗು ಎಂದು ಸಿವಿಲ್ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ತಿಳಿಸಿದರು.

ಸೋಮವಾರ ಪಟ್ಟಣದ ಎಸ್.ಸಿ.ಎಸ್.ಫಾರ್ಮಸಿ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಟಿ.ಎಂ.ಎ.ಇ.ಸಂಸ್ಥೆಯ ಎಸ್.ಸಿ.ಎಸ್.ಫಾರ್ಮಸಿ ಕಾಲೇಜು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾದಕ ವ್ಯಸನ ತಡೆಗಟ್ಟುವಿಕೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರು ಎರೆ ಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಾಗಿ ತಮ್ಮ ತಂದೆ-ತಾಯಿಗೆ ಸೃಜನಶೀಲ ಮಕ್ಕಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಅಧಿಕಾರಿ ಡಾ.ಹಾಲಸ್ವಾಮಿ ಮಾತನಾಡಿ, ಉತ್ತೇಜಕ ಪದಾರ್ಥ  ಸೇವಿಸುವುದರಿಂದ ವ್ಯಕ್ತಿಯು ಮನೋವಿಕಲ್ಪ ಸಮಾಧಿ ಸ್ಥಿತಿ ತಲುಪುತ್ತಾನೆ. ಮದ್ಯ, ತುಂಬಾಕು, ಗಾಂಜಾ, ಕೊಕೇನ್ ಓಪಿಯಮ್, ಆಂಫಿಟಮೈನ್, ಹೆರಾಯಿನ್, ಎಲ್.ಎಸ್.ಡಿ.ಪಿ.ಸಿ.ಪಿ.
ನಿದ್ದೆ ಮಾತ್ರೆಗಳು, ಅನಿಲಗಳು ಮಾದಕ
ವಸ್ತು ಗಳಾಗಿದ್ದು, ಇವುಗಳ ಸೇವನೆಯಿಂದ ವ್ಯಕ್ತಿಯು ಲೋಲುಪ್ತತೆನ್ನು ಬೆಳೆಸಿಕೊಳ್ಳುವು ದರೊಂದಿಗೆ  ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಟಿ.ಎಂ.ಎ.ಇ. ಸಂಸ್ಥೆಯ ಆಡಳಿತಾಧಿಕಾರಿ ಟಿ.ಎಂ.
ಪ್ರತೀಕ್, ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಣ್ಣ ಮಾತನಾಡಿದರು, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶಗೌಡ, ವಕೀಲರ ಸಂಘದ ಉಪಾಧ್ಯಕ್ಷ ಕೆ.ವಿರುಪಾಕ್ಷಪ್ಪ, ಕಾರ್ಯದರ್ಶಿ ಕೆ.ಆನಂದ, ಪ್ರಾಚಾರ್ಯ ಡಾ.ಹೆಚ್.ಎಂ.ಶುಭುಲಿಂಗಯ್ಯ, ಡಾ.ನಾಗೇಂದ್ರಪ್ಪ, ವಕೀಲರಾದ ಎಂ.ಮೃತ್ಯುಂಜಯ, ಬಿ.
ಸಿದ್ದೇಶ್, ಸಿ.ಹನುಮಂತಪ್ಪ, ಬಿ.ತಿಪ್ಪೇಶ್, ಕಾನೂನು ಸೇವಾ ಸಮಿತಿ ಸಿಬ್ಬಂದಿಗಳಾದ ಕೊಟ್ರೇಶ್, ಬಸವರಾಜ, ಕಾಲೇಜು ಸಿಬ್ಬಂದಿಗಳು, ಮತ್ತಿತರರಿದ್ದರು.

error: Content is protected !!