ಕೇಂದ್ರ ಸರ್ಕಾರದಿಂದ ಪಾರದರ್ಶಕವಾಗಿ ಜನಪರ ಯೋಜನೆಗಳ ಜಾರಿ

ಕೇಂದ್ರ ಸರ್ಕಾರದಿಂದ ಪಾರದರ್ಶಕವಾಗಿ ಜನಪರ ಯೋಜನೆಗಳ ಜಾರಿ

ಹರಪನಹಳ್ಳಿ, ಅ.3- ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಸೇರಿದಂತೆ, ಜನಪರ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ನಿಟ್ಟೂರು ಹಾಗೂ ಇತರೆ 6 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 

ಹಲವು ಬಾರಿ ತುಂಗಭದ್ರಾ ನದಿ ಪಾತ್ರದ ಅನೇಕ ಗ್ರಾಮಗಳಿಗೆ ಬಂದಿದ್ದೇನೆ. ನದಿ ಹತ್ತಿರ ವಿರುವ ಗ್ರಾಮ ಗಳಿಗೆ ಕುಡಿಯುವ ನೀರನ್ನು ಕಲ್ಪಿಸ ಬೇಕು ಎಂದು ಹಿಂದಿ ನ ಶಾಸಕರಿಗೂ ತಿಳಿಸಿದ್ದೆ. ಆದರೆ, ಕೆಲವರು ಇದಕ್ಕೆ ಅಡ್ಡ ಗಾಲು ಹಾಕಿದ್ದರು ಈ ರೀತಿಯಾಗದಂತೆ ಎಲ್ಲರಿಗೂ ಕುಡಿ ಯುವ ನೀರಿನ ಸೌಲಭ್ಯ ಅನುಕೂಲವಾಗಲಿದೆ ಎಂದರು.

ಶಾಸಕರು ಕೆ.ಕೆ.ಆರ್.ಡಿ.ಬಿ. ಯೋಜನೆಯಲ್ಲಿ ಅನುದಾನವನ್ನು ಬಳಸಿಕೊಳ್ಳಿ, ಅನುದಾನ ಬರುವವರೆಗೂ ಕಾಯಬೇಕಾಗುತ್ತದೆ. ಈಗಿನ ಶಾಸಕರು ಬಿಜೆಪಿ ಅವಧಿಯಲ್ಲಿನ ಯಾವುದೇ ಕಾಮಗಾರಿಗಳಿಗೆ ಪೂಜೆ, ಉದ್ಘಾಟನೆ ಮಾಡಿದರೂ ಅವು ನಮ್ಮವೇ ಎಂದ ಅವರು, ಮುಂದೆ ನಾನು ಸಂಸದನಾದ ಮೇಲೆ ಶಾಸಕರು, ನಾವು ಸೇರಿ ಕೆಲಸ ಮಾಡುವುದಾಗಿ ತಿಳಿಸಿದರು.

ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಮಾತನಾಡಿ, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ಕಡತಿ, ನಂದ್ಯಾಲ, ಒಳತಾಂಡಾ ಮತ್ತು ವಟ್ಲಳ್ಳಿ ಸೇರಿ 6 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯು ಒಟ್ಟು 377.70 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ಉತ್ತಮ ಗುಣಮಟ್ಟದ ಪೈಪ್‍ಗಳನ್ನು ಅಳವಡಿಸಿ ಕುಡಿಯುವ ನೀರಿನ ಸರಬರಾಜಿಗೆ ಮುಂದಾಗಬೇಕು. ಇದಕ್ಕೆ ಸ್ಥಳೀಯ ಸಾರ್ವಜನಿಕರ ಸಹಾಯ ಅಗತ್ಯವಿದೆ ಎಂದು ಹೇಳಿದರು.

ಸಂಸದರು ಮಾತನಾಡುವ ವೇಳೆ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ಕೊಡುತ್ತಿದೆ, ಇನ್ನೂ 5 ಕೆ.ಜಿ.ಅಕ್ಕಿಯನ್ನು ರಾಜ್ಯ ಸರ್ಕಾರ ಕೊಡಬೇಕು. ಕೊಡಿಸುವ ಕೆಲಸವನ್ನು ಶಾಸಕರು ಮಾಡಬೇಕು ಎಂದಾಗ ಮದ್ಯೆ ಪ್ರವೇಶಿಸಿದ ಶಾಸಕರಾದ  ಲತಾ ಅವರು ನಾನು ಕಾಂಗ್ರೆಸ್ ಶಾಸಕಿಯಲ್ಲ, ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ. ನಾನು ಬಿಜೆಪಿ, ಕಾಂಗ್ರೆಸ್‍ಗೆ ಸೇರಿಲ್ಲ ಎಂದರು. ಹಾಗಾದರೆ ಮುಂದಿನ ಚುನಾವಣೆಯಲ್ಲಿ ನನಗೆ ಸಹಾಯ ಮಾಡಿ ಎಂದು ಸಂಸದರು ಮನವಿ ಮಾಡಿಕೊಂಡರು.

ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಮುಖಂಡ ಪಿ.ಮಹಾಬಲೇಶ್ವರಗೌಡ, ನೀವು ಪಕ್ಷೇತರ ಎನ್ನಬಾರದು, ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದೀರ, ಅದಕ್ಕೆ ಕಾಂಗ್ರೆಸ್ ಶಾಸಕರು ಎಂದೇ ಹೇಳಬೇಕು ಎಂದರು.

ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ: ಸಂಸದ  ಸಿದ್ದೇಶ್ವರ ಮಾತನಾಡುವ ವೇಳೆ ಸಾರ್ವಜನಿಕರೊಬ್ಬರು ಯಾವ ಸರ್ಕಾರ ಅನುದಾನ ಹಾಕಿದರೂ ಹಣ ಯಾರದ್ದು ಎಂದು ಕೇಳಿದಾಗ, ಅದು ನಿಮ್ಮದೇ ದುಡ್ಡು (ಸಾರ್ವ ಜನಿಕರ ಹಣ), ನಾನೇನು ಮನೆಯಿಂದ ಹಣ ಕೊಡಲ್ಲ, ಸರ್ಕಾರ ಕೊಡಲ್ಲ, ಅದು ತಿನ್ನುವಷ್ಟು ತಿಂದು ಕೊಡ್ತಾರೆ. ಇದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ ಆಗುತ್ತಿಲ್ಲ ಎಂದರು.

ನಮ್ಮ ಸರ್ಕಾರ ಮನೆಗಳನ್ನು ಕೊಟ್ಟಿದೆ ಎಂದಾಗ ನಿಟ್ಟೂರು ಗ್ರಾಮದ ಎಚ್.ಟಿ.ವನಜಾಕ್ಷಿ ಅವರು ಎಲ್ಲಿ ಕೊಟ್ಟಿದ್ದಾರೆ ಸಾರ್, 5 ವರ್ಷಗಳಿಂದ ಒಂದು ಮನೆನೂ ಬಂದಿಲ್ಲ. ಬಡವರು ಇನ್ನು ಗುಡಿಸಲಲ್ಲೇ ಇದ್ದಾರೆ ಎಂದು ಕೇಳಿದಾಗ, ಇಲ್ಲ ಕೊಟ್ಟಿದೆ ನಿಮಗೆ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಧಾ ಶಿವಾನಂದ ಬಾರ್ಕಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕಿರಣ್‌ ನಾಯ್ಕ್, ಅಕ್ಷಯ್, ಮುಖಂಡರಾದ ಎಚ್.ಟಿ.ಶಿವಯೋಗಿ, ರಮೇಶ್‌ ಹುಲಿ, ಬಾರ್ಕಿ ಮಲ್ಲಿ ಕಾರ್ಜುನ, ಸಿದ್ದಲಿಂಗಸ್ವಾಮಿ, ಸೋಮಶೇಖರ, ಮಂಜುನಾಥ, ಮತ್ತೂರು ಬಸವರಾಜ, ನಾಗರಾಜ, ಹನುಮಂತ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.

error: Content is protected !!