ಹರಪನಹಳ್ಳಿ, ಮೇ 10- ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪುರಸಭೆ ವ್ಯಾಪ್ತಿಯಲ್ಲಿರುವ 39 ಮತಗಟ್ಟೆಗಳಲ್ಲಿನ ವಿಕಲಚೇತನ ಮತದಾರ ರನ್ನು ಕರೆತರಲು ಮತ್ತು ಕಳುಹಿಸಲು ಪ್ರತಿ 4 ಮತಗಟ್ಟೆಗೆ ಒಂದರಂತೆ ಪ್ರಯಾಣಿಕರ ವಿಶೇಷ ವಾಹನ ವ್ಯವಸ್ಥೆಯನ್ನು ಪುರಸಭೆ ವತಿಯಿಂದ ಕಲ್ಪಿಸಲಾಗಿತ್ತು. ಆ ವಾಹನಗಳಿಗೆ ಪುರಸಭೆಯ ಯು.ಆರ್. ಡಬ್ಲ್ಯು ಹಾಗೂ ಕಛೇರಿಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು.
ಸದರಿಯವರು ತಮ್ಮ ತಮ್ಮ ವ್ಯಾಪ್ತಿಯ ವಿಕಲಚೇತನರನ್ನು ಮತಗಟ್ಟೆಗೆ ಕರೆತಂದು ಹಾಗೂ ಮತ್ತೆ ವಾಪಾಸ್ ಮನೆಗೆ ಕಳುಹಿಸುವ ಕೆಲಸದಲ್ಲಿ ನಿರತರಾಗಿದ್ದುದು ಸಾಮಾನ್ಯವಾಗಿತ್ತು.
ಮತದಾನದಲ್ಲಿ ವಿಕಲಚೇತನರ ಭಾಗವಹಿಸು ವಿಕೆಯ ಪ್ರತಿಫಲದಿಂದಾಗಿ ಮತದಾನ ಸುಗಮವಾಗಿ ನಡೆಯಿತು. ವಿಕಲಚೇತನರು ಶೇ.98.99 ರಷ್ಟು ಮತದಾನ ಮಾಡಿ ತಾವು ಸಾಮಾನ್ಯ ಮತದಾರರಿಗಿಂತ ಹೆಚ್ಚು ಎನ್ನುವುದನ್ನು ಚುನಾವಣೆ ಇಲಾಖೆಗೆ ಸಾಬೀತುಪಡಿಸಿದ್ದಾರೆ.