ಚನ್ನಗಿರಿ, ಸೆ.30- ತಣಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮಚಂದ್ರಪ್ಪ, ಉಪಾಧ್ಯಕ್ಷರಾಗಿ ಪ್ರಕಾಶ್ ಮಂಟ್ರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸದಸ್ಯರಾದ ಮಾರುತಿ ಎಂ.ಆರ್., ಮಲ್ಲೇಶ್ ಎನ್., ರಾಜಪ್ಪ ನೀರ್ಥಡಿ, ತಿಪ್ಪೇಸ್ವಾಮಿ ಸಿ.ಆರ್., ಬಿ.ಜಿ. ರೇವಣ್ಣ, ನೀಲಮೂರ್ತಪ್ಪ, ಶ್ರೀಮತಿ ವೀಣಾ, ಶ್ರೀಮತಿ ಶಾರದಮ್ಮ ಹಾಗೂ ಇತರರು ಹಾಜರಿದ್ದರು.