ತುರ್ತು ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ

ಕೂಡ್ಲಿಗಿ, ಡಿ.21 – ತಾಲ್ಲೂಕು ಹುರುಳಿಹಾಳು ಮ್ಯಾಸರಹಟ್ಟಿ ಗ್ರಾಮದ ತುಂಬು ಗರ್ಭಿಣಿ ರೂಪ 108 ತುರ್ತು ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸಿಬ್ಬಂದಿ ಜ್ಯೋತಿ ಹಾಗೂ ವಾಹನ ಚಾಲಕ ಖಾಜಾ ಸಾಬ್‌ ಅವರು, ತಮ್ಮ ಕರ್ತವ್ಯ ಹಾಗೂ ಸಮಯ ಪ್ರಜ್ಞೆ ಮೆರೆಯುವ ಮೂಲಕ ವಾಹನದಲ್ಲಿಯೇ ಹೆರಿಗೆ ಸೇವೆ ನಿರ್ವಹಿಸಿದ್ದಾರೆ. ರೂಪಾಳಿಗೆ ಹೆರಿಗೆ ನೋವು ಶುರುವಾದ ಸಂದರ್ಭದಲ್ಲಿ 108 ಸಿಬ್ಬಂದಿ ವಾಹನದೊಂದಿಗೆ ಮ್ಯಾಸರಹಟ್ಟಿಗೆ ತೆರಳಿದ್ದಾರೆ. ಚಿಕ್ಕಜೋಗಿಹಳ್ಳಿ ಯಲ್ಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಜಗಳೂರು ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಆಂಬ್ಯುಲೆನ್ಸ್ ನಲ್ಲಿಯೇ  ರೂಪ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ – ಮಗು ಆರೋಗ್ಯವಾಗಿದ್ದಾರೆ. 

error: Content is protected !!