ಕೊಟ್ಟೂರು, ಡಿ.3 – ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಸಂತ ಶ್ರೇಷ್ಠ ಕನಕದಾಸದ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕೊಟ್ಟೂರಿನ ಸರ್ಕಾರಿ ಪಿ.ಯು. ಕಾಲೇಜಿನ ಉಪನ್ಯಾಸಕ ಅಂಜಿನಪ್ಪ ಅವರು ಕನಕದಾಸರ ಬದುಕು ಮತ್ತು ಬರಹದ ಬಗ್ಗೆ ಉಪನ್ಯಾಸ ನೀಡಿದರು.
ನಂತರ ಮಾತನಾಡಿದ ತಹಶೀಲ್ದಾರ್ ಜಿ.ಅನಿಲ್ ಕುಮಾರ್ ದಾಸ ಸಾಹಿತ್ಯದಲ್ಲಿ ದಿಗ್ಗಜರೆನ್ನಿಸಿಕೊಂಡವರಲ್ಲಿ ಕನಕದಾಸರೂ ಒಬ್ಬರು. ಇವರಿಗೆ ದಾಸ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವಿದೆ ಎಂದರು. ನಂತರ ಕನಕದಾಸರು ಸಮಾಜದ ಕೆಳಸ್ತರದಿಂದ ಬಂದವರಾಗಿದ್ದರಿಂದ ಕೆಳಜಾತಿಯ ನೋವಿನ ಅರಿವು ಅವರಿಗಿತ್ತು. ಹಾಗಾಗಿಯೇ ಸಾಹಿತ್ಯದ ಮೂಲಕ ಮೇಲ್ಜಾತಿ, ಕೀಳ್ಜಾತಿ, ಬಡವ, ಶ್ರೀಮಂತ ಎನ್ನುವ ತಾರಮತ್ಯ ತೊಡೆದು ಹಾಕಲು ಸಾಮಾಜಿಕ ಜಾಗೃತಿ ಮೂಡಿಸಿದರು. ಇವರ ಸಾಹಿತ್ಯದ ವಿಚಾರ ಧಾರೆ ಇಂದಿಗೂ ಪ್ರಸ್ತುತ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ಜಿ ಸುರೇಶ್ ಬಾಬು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು ಗಿರೀಶ್ ಎಂ. ಕೆ. ಜಲಪೂರ್, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಸಿ.ಮರಿಯಪ್ಪ, ಜಿಲ್ಲಾ ಕುರುಬ ಸಮಾಜದ ಉಪಾಧ್ಯಕ್ಷ, ಮಂಜಣ್ಣ ತಾ ಪಂ ಸದಸ್ಯ, ಅಲಬೂರು ಕ್ಷೇತ್ರ, ಕೆಂಚಪ್ಪ ತಾಲ್ಲೂಕು ಪಂಚಾಯಿತಿ ಎ.ಡಿ., ಪರಶುರಾಮಪ್ಪ ತಾಲ್ಲೂಕು ಕನಕ ನೌಕರರ ಸಂಘ, ಬಸವರಾಜ ಶಿಕ್ಷಕರು ಹೊಸಹಳ್ಳಿ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಶಿವಕುಮಾರ್, ಸಿರಾಜುದ್ದೀನ್, ಹನುಮಂತ, ಗ್ರಾಮ ಲೆಕ್ಕಿಗರಾದ ರಮೇಶ, ಆಶಾ, ದ್ಯಾವಮ್ಮ, ಮಂಜಮ್ಮ ಹಾಗೂ ಇತರರು ಇದ್ದರು.
ರವಿ ಹರಪನಹಳ್ಳಿ ಸ್ವಾಗತಿಸಿದರು. ಸೀಮಾ ಗುರುಬಸವರಾಜ ಕಾರ್ಯಕ್ರಮ ನಿರೂಪಿಸಿದರು.