ರಾಣೇಬೆನ್ನೂರು, ಜು. 8- ಇಲ್ಲಿನ ಹಲಗೇರಿ ರಸ್ತೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕೋವಿಡ್ ರೋಗ ಪತ್ತೆ ಘಟಕದ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ಅವರು ಶಂಕುಸ್ಥಾಪನೆ ಮಾಡಿದರು.
ದೇಶದಾದ್ಯಂತ ಕೊರೊನಾ ವೈರಸ್ ಶೀಘ್ರವಾಗಿ ಹರಡುತ್ತಿದ್ದು ರೋಗ ಪತ್ತೆಗೆ ಲ್ಯಾಬ್ ಅವಶ್ಯಕತೆ ಬಹಳಷ್ಟಿರುವುದರಿಂದ ತಿಂಗಳೊ ಳಗಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಅತಿ ಶೀಘ್ರದಲ್ಲಿ ಘಟಕ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ
ಹೇಳಿದರು.
ರೋಗಿಗಳ ಚಿಕಿತ್ಸೆಗೆ ಈ ಸರ್ಕಾರಿ ಆಸ್ಪತ್ರೆಯಲ್ಲಿ 30 ಹಾಸಿಗೆಗಳಿದ್ದು ಇನ್ನು 55 ಹಾಸಿಗೆಗಳ ವ್ಯವಸ್ಥೆಯನ್ನ ಹುಣಸಿಕಟ್ಟೆ ರಸ್ತೆಯ ವಸತಿ ಗೃಹದಲ್ಲಿ ಮಾಡಲಾಗಿದೆ.
ಒಂದನೇ ಹಾಗೂ ಎರಡನೇ ಹಂತದ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಿದ ಕೊನೆಯ ಹಂತದ ರೋಗಿಗಳಿಗೆ ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಿಸಿ ವಿವರಿಸಿದರು.
ಶಾಸಕ ಅರುಣಕುಮಾರ ಪೂಜಾರ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಸದಸ್ಯರಾದ ಗಂಗಮ್ಮ ಹಾವನೂರ, ಅನ್ನಪೂರ್ಣ ತಿಳವಳ್ಳಿ, ರಾಜು ಅಡ್ಮನಿ, ಪ್ರಕಾಶ ಪೂಜಾರ, ಮಲ್ಲಣ್ಣ ಅಂಗಡಿ ಮತ್ತಿತರರಿದ್ದರು.