ಹೊನ್ನಾಳಿ, ಜು.8- ವಿಶ್ವದಲ್ಲೇ ಭಾರತ ದೇಶದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಇತಿಹಾಸ ನಿರ್ಮಾಣ ಮಾಡಿದೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲ್ಲೂಕು ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಇಂದಿಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವುದರಿಂದ ರೈತರಿಗೆ ಆಟೋ ಚಾಲ ಕರಿಗೆ ಉದ್ದಿಮೆಗಳಿಗೆ ಭಾರೀ ಹೊಡೆತ ಬೀಳಲಿದೆ ಎಂದ ಅವರು, ನಿತ್ಯ ಏರಿಕೆಯ ಬಗ್ಗೆ ಜನಸಾ ಮಾನ್ಯರಿಗೆ ತಿಳಿಸುವ ಕೆಲಸವನ್ನು ಮಾಡಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ.ಮಂಜಪ್ಪ ಮಾತನಾಡಿ, ತೈಲ ಬೆಲೆ ಏರಿಕೆಯನ್ನು ದೇಶದ ಉದ್ದಗಲಕ್ಕೂ ರೈತರು ಕಾರ್ಮಿಕರು ಎತ್ತಿನ ಗಾಡಿ ಸೈಕಲ್ ಮೇಲೆ ಕುಳಿತು ಪ್ರತಿಭಟನೆ ಮಾಡಿದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಕಿಡಿ ಕಾರಿದರು.
ಕೊರೊನಾ ಬಗ್ಗೆ ದಾವಣಗೆರೆ ಸೇರಿದಂತೆ ಜಿಲ್ಲೆಯಲ್ಲಿ ಒಂದು ಕಾನೂನು. ಆದರೆ, ರೇಣುಕಾ ಚಾರ್ಯ ಅವರಿಗೆ ಒಂದು ಕಾನೂನು ಆಗಿದೆ. ಹೊನ್ನಾಳಿ ಪಟ್ಟ ಣದಲ್ಲಿ ವರ್ತಕರಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ಮಾಡಿ ರುವುದು ನಂತರ ಬಂದ್ ಮಾಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡ ಬಿ.ಸಿದ್ದಪ್ಪ, ಜಿಪಂ ಸದಸ್ಯ ದೊಡ್ಡೇರಿ ವಿಶ್ವನಾಥ್, ಸಾಸ್ವೆಹಳ್ಳಿ ಘಟಕದ ಅಧ್ಯಕ್ಷ ಹೆಚ್.ಎ.ಗದ್ದಿಗೇಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅರಕೆರೆ ಮಧುಗೌಡ ಮಾತನಾಡಿದರು.
ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷ ಉಮಾಪತಿ, ತಾ.ಪಂ ಸದಸ್ಯ ಅಬೀದ್ ಅಲಿಖಾನ್, ಎಪಿಎಂಸಿ ಸದಸ್ಯರಾದ ಎಸ್.ಎಸ್.ಬೀರಪ್ಪ, ದಿಡಗೂರು ಪ್ರಕಾಶ್, ಗಜೇಂದ್ರಪ್ಪ, ಯುವ ಘಟಕದ ಉಪಾಧ್ಯಕ್ಷ ರಂಜಿತ್, ಕೆಂಗಲಹಳ್ಳಿ ಮರಳುಸಿದ್ದಪ್ಪ, ಪ್ರಭಾಕರ, ಶೇಖರಪ್ಪ, ಸುರೇಶ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ತರಗನಹಳ್ಳಿ ರಮೇಶ್‍ಗೌಡ, ಪ.ಪಂ ಸದಸ್ಯ ಸುರೇಶ್, ಕುಂದೂರು ರಾಜು ಮನು ವಾಲಜ್ಜಿ ಮತ್ತಿತರರು ಇದ್ದರು.