ಮಲೇಬೆನ್ನೂರು, ಜೂ. 19- ಮಾಸ್ಕ್ ದಿನಾಚರಣೆ ಮತ್ತು ಜನ ಸಮುದಾಯದಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜನ ಜಾಗೃತಿ ಪಾದಯಾತ್ರೆಗೆ ಪುರಸಭೆ ಮುಂಭಾಗದಲ್ಲಿ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಉಪ ತಹಶೀಲ್ದಾರ್ ರವಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ನೀಡಿ, ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ತಿಳಿ ಹೇಳಲಾಯಿತು. ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ಮಾತನಾಡಿದರು.
ಪುರಸಭೆ ಸದಸ್ಯರಾದ ಬಿ. ಸುರೇಶ್, ಎ. ಆರೀಫ್ ಅಲಿ, ದಾದಾವಲಿ, ಮಹಾಂತೇಶ್ ಸ್ವಾಮಿ, ಎಂ.ಬಿ. ಫೈಜು, ಪಾನಿಪೂರಿ ರಂಗನಾಥ್, ಆದಾಪುರ ವಿಜಯ ಕುಮಾರ್, ಪಾಳೇಗಾರ್ ನಾಗರಾಜ್, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆಯ ಆರೋಗ್ಯಾಧಿಕಾರಿ ಗುರುಪ್ರಸಾದ್, ನವೀನ್ ಮತ್ತಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.