ದಾವಣಗೆರೆ, ಜೂ.12- ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ದಾವಣಗೆರೆ ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ವತಿಯಿಂದ ನಡೆಸುತ್ತಿರುವ ಎಸ್.ಎಸ್. ಕಪ್ -2020 ಟೆನ್ನಿಸ್ ಬಾಲ್ ಟೂರ್ನಿಮೆಂಟ್‌ಗೆ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಅವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
6 ದಿನಗಳ ಕಾಲ ಲೀಗ್ ಕಂ ನಾಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ಜಿಲ್ಲಾ ಕ್ರೀಡಾಂಗಣ (ಸ್ಟೇಡಿಯಂ) ದಲ್ಲಿ ನಡೆಯಲಿದ್ದು, ಪ್ರಥಮ ಬಹುಮಾನ 33,333 ನಗದು ಮತ್ತು ಟ್ರೋಫಿ ದ್ವಿತೀಯ ಬಹುಮಾನ 22,222 ನಗದು ಮತ್ತು ಟ್ರೋಫಿ ಇರುತ್ತದೆ, 20 ತಂಡಗಳು ಭಾಗವಹಿಸಿವೆ.
ಈ ಸಂದರ್ಭದಲ್ಲಿ ಶಿವಗಂಗಾ ಗ್ರೂಪ್ ಮಾಲೀಕರೂ, ಕ್ರೀಡಾ ಪ್ರೋತ್ಸಾಹಕರಾದ ಶಿವಗಂಗಾ ಶ್ರೀನಿವಾಸ್, ಮಹಾನಗರ ನಗರ ಪಾಲಿಕೆ ವಿಪಕ್ಷ ನಾಯಕ ನಾಗರಾಜ್, ಮಹಾನಗರ ಪಾಲಿಕೆ ಸದಸ್ಯರುಗಳಾದ ದೇವರಮನಿ ಶಿವಕುಮಾರ್, ಗಡಿಗುಡಾಳ್ ಮಂಜುನಾಥ್, ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹದೇವ್, ರಾಜು ರೆಡ್ಡಿ, ರಮೇಶ್, ಸುರೇಶ್, ಶೌಕತ್, ರವಿ, ಸುರಭಿ ವಿನಯ್, ಸಂಘಟಕರಾದ ಕುರುಡಿ ಗಿರೀಶ್, ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.