ಇಂದಿನಿಂದ ದೇವರ ದರ್ಶನ

ದಾವಣಗೆರೆ, ಜೂ. 7-  ಕಳೆದ ಎರಡೂವರೆ ತಿಂಗಳಿನಿಂದ ಬಾಗಿಲು ಮುಚ್ಚಿದ್ದ ದೇವನಗರಿಯ ದೇವಾಲಯಗಳು ಸೋಮವಾರ ಭಕ್ತರಿಗೆ ದರ್ಶನ ನೀಡಲು ಸಜ್ಜಾಗಿವೆ. 

ಭಾನುವಾರ ಬೆಳಿಗ್ಗೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ಸಮೀಪದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ಚೌಕಿಪೇಟೆಯ ಶ್ರೀ ಬಕ್ಕೇಶ್ವರ ಸ್ವಾಮಿ ದೇವಸ್ಥಾನ, ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ಶಾಮನೂರು ಶ್ರೀ ಆಂಜನೇಯ ದೇವಸ್ಥಾನ, ಆನೆಕೊಂಡದ ಬಸವೇಶ್ವರ ದೇವಸ್ಥಾನ, ನಿಟುವಳ್ಳಿ ಕರಿಯಾಂಬಿಕಾ ದೇವಿ ದೇವಸ್ಥಾನ, ಎಂ.ಸಿ.ಸಿ. ಬಿ ಬ್ಲಾಕ್‌ನ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಬನಶಂಕರಿ ದೇವಸ್ಥಾನ, ಅಶೋಕ ಚಿತ್ರಮಂದಿರದ ಲಿಂಗೇಶ್ವರ ದೇವಸ್ಥಾನ, ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸೋಡಿಯಂ  ಹೈಪೋಕ್ಲೋರೈಟ್‌ ರಾಸಾಯನಿಕ ದ್ರಾವಣ ಸಿಂಪರಣೆ ಮಾಡಿದರು.

ದೇವಸ್ಥಾನಗಳಷ್ಟೇ ಅಲ್ಲದೆ, ಪಿ.ಜೆ ಬಡಾವಣೆ ಯಲ್ಲಿರುವ ಸಂತ ತೋಮಸರ ದೇವಾಲಯ ಹಾಗೂ ಕೆಲ ದರ್ಗಾಗಳಿಗೂ ರಾಸಾಯನಿಕ ಸಿಂಪರಣೆ ಮಾಡಲಾಯಿತು. ಸುಮಾರು ಹದಿನೈದಕ್ಕೂ ಹೆಚ್ಚು ಸಿಬ್ಬಂದಿಗಳು ಔಷಧಿ ಸಿಂಪರಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾಗಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮ `ಜನತಾವಾಣಿ’ಗೆ ತಿಳಿಸಿದರು.

ಬಹುದಿನಗಳ ನಂತರ ಭಕ್ತರ ಆಗಮನಕ್ಕೆ ಸಿದ್ಧವಾಗುತ್ತಿರುವ ದೇವಾಲಯಗಳಲ್ಲಿ ಸಾಮಾ ಜಿಕ ಅಂತರ ಕಾಪಾಡಿಕೊಳ್ಳಲು, ಭಕ್ತರು ಮಾಸ್ಕ್ ಧರಿಸಿ ಬರುವುದು ಸೇರಿದಂತೆ ನಿಯಮಗಳನ್ನು ಪಾಲಿಸಲು ಸೂಚನಾ  ಫಲಕಗಳನ್ನು ಅಳವ ಡಿಸಲು ಸಿದ್ಧತೆ ನಡೆಯುತ್ತಿತ್ತು.

ದೇವಾಲಯಗಳಲ್ಲಿ ತೀರ್ಥ, ಪ್ರಸಾದ, ಸಾಮೂಹಿಕ ಭಜನೆ, ಪ್ರಾರ್ಥನೆಗೆ ಅವಕಾಶವಿಲ್ಲ. ಯಾರಾ ದರೂ ಅನಾರೋಗ್ಯದಿಂದ ಬಳಲುತ್ತಿದ್ದ ವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ ಎಂಬುದೂ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಸರ್ಕಾರ ನೀಡಿದೆ. 

ಚರ್ಚ್‍ನಲ್ಲಿ ಪ್ರಾರ್ಥನೆಗೆ ಸಿದ್ಧತೆ: ನಗರದಲ್ಲಿನ ವಿವಿಧ ಚರ್ಚ್‍ಗಳಲ್ಲೂ ಜೂನ್ 14ರಿಂದ ಸಾಮೂಹಿಕ ಪ್ರಾರ್ಥನೆ ನಡೆಸುವ ಕುರಿತು ಆಯಾಯ ಚರ್ಚ್‌ಗಳ ಧರ್ಮ ಗುರುಗಳು, ಆಡಳಿತ ಮಂಡಳಿ, ಸಮಾಜ ಮುಖಂಡರ ಸಭೆ ನಡೆಸಿ ತಿರ್ಮಾನಿಸಲಿದ್ದಾರೆ. ಚರ್ಚ್‍ಗಳಲ್ಲಿ ಸ್ವಚ್ಛತೆ, ಪ್ರಾರ್ಥನೆಗೆ ಅಗತ್ಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಚರ್ಚ್‍ಗಳ ಆವರಣದಲ್ಲೂ ಬಾಕ್ಸ್ ಹಾಕಲಾಗುತ್ತಿದೆ.

error: Content is protected !!