ದಾವಣಗೆರೆ, ಮೇ 30- ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮಾ ಬಸವಂತಪ್ಪ ಇಂದು ಕೈದಾಳೆ ಗ್ರಾಮಕ್ಕೆ ಭೇಟಿ ನೀಡಿ, ನರೇಗಾ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.
ಇದೇ ವೇಳೆ ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಅವರು ಕೈದಾಳೆ ಗ್ರಾ.ಪಂ ಗೆ ನೀಡಿರುವ ಸ್ಟ್ಯಾಂಡ್, ಸ್ಯಾನಿಟೈಸರ್ ಸಲಕರಣೆಯನ್ನು ಉದ್ಘಾಟಿಸಿದರು.
ಕೈದಾಳೆ ಗ್ರಾಮದಲ್ಲಿ 130 ಜನರು ನರೇಗಾ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೀರಾವರಿ ಕಾಲುವೆ ಹೂಳೆತ್ತುವ ಕಾಮಗಾರಿ, ಕೃಷಿ ಹೊಂಡ, ಎರೇಹುಳು ಗೊಬ್ಬರ ಘಟಕ ಕಾಮಗಾರಿ, ಬೋರ್‌ವೆಲ್ ರೀಚಾರ್ಜ್ ಪಿಟ್ ಹಾಗೂ ಗುಲಾಬಿ ಬೆಳೆ ಬೆಳೆದಿರುವ ರೈತನ ಹೊಲಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ವಿಶೇಷ ಭೂಸ್ವಾಧಿನಾಧಿಕಾರಿ ರೇಷ್ಮಾ ಹಾನಗಲ್ ಜಿಲ್ಲಾ ಸಾಮಾಜಿಕ ಪರಿಶೀಲನಾ ಸಂಯೋಜಕರಾದ ಜಯಪ್ರಕಾಶ್ , ಜಿಲ್ಲಾ ಐಇಸಿ ಸಂಯೋಜಕ ಚಂದನ್, ಪಿಡಿಒ ಐ.ಸಿ. ವಿದ್ಯಾವತಿ, ಕಾರ್ಯದರ್ಶಿ ಜಯಪ್ಪ, ಬಿಲ್ ಕಲೆಕ್ಟರ್ ಉಮೇಶ್ ಉಪಸ್ಥಿತರಿದ್ದರು.