ಹರಿಹರ, ಮೇ 30- ನಗರದ ತೆಗ್ಗಿನಕೇರಿ ಬಡಾವಣೆಯಲ್ಲಿ 25 ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಹಾಲೇಶ್ ಅವರಿಗೆ (ವಾರ್ಡ್ ನಂಬರ್ 5) ತೆಗ್ಗಿನ ಕೆರೆಯ ಮಿಲ್ಲತ್ ಸರ್ಕಲ್ ಯುವಕರು ಹಾಗೂ ಕ.ಸ.ಬಾ ಜಾಮಿಯಾ ಮಸೀದಿ ಆಡಳಿತ ಮಂಡಳಿ ಹಾಗೂ ತೆಗ್ಗಿನಕೇರಿ ಮುಸ್ಲಿಂ ಸಮಾಜದ ಮುಖಂಡರು ರಂಜಾನ್ ಹಬ್ಬದ ಪ್ರಯುಕ್ತ ಸನ್ಮಾನಿಸಿದರು. ಹಾಲೇಶ್ ಅವರ ಮೂರು ತಲೆಮಾರಿನವರೂ ಸಹ ಇದೇ ತೆಗ್ಗಿನಕೆರೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಇಲ್ಲಿ ಸ್ಮರಿಸಿದರು. ಅಜ್ಜ ಎಲ್ಲಪ್ಪ, ತಂದೆ ದುರ್ಗಪ್ಪ ಇವರು ಸಹ ತೆಗ್ಗಿನಕೇರಿಯಲ್ಲಿ ಪೌರ ಕಾರ್ಮಿಕರಾಗಿ ನಿವೃತ್ತರಾಗುವವರೆಗೂ ಕಾರ್ಯ ನಿರ್ವಹಿಸಿದ್ದಾರೆ.
ಈ ಸಮಯದಲ್ಲಿ 5ನೇ ವಾರ್ಡಿನ ನಗರಸಭೆ ಸದಸ್ಯ ಕೆ.ಜಿ.ಸಿದ್ದೇಶ್ ಸೇರಿದಂತೆ ತೆಗ್ಗಿನಕೇರಿ ಮುಸ್ಲಿಂ ಸಮಾಜದವರು ಹಾಜರಿದ್ದರು.