ದಾವಣಗೆರೆ, ಮೇ 31- ನಗರದ ಸಿ.ಜಿ ಆಸ್ಪತ್ರೆ ಮತ್ತು ಕೆಟಿಜೆ ನಗರ ಹೊಸ ಬಸ್ ನಿಲ್ದಾಣ ಬಳಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇಂದಿರಾಗಾಂಧಿ ಭಾವ ಚಿತ್ರಕ್ಕೆ ಕಪ್ಪು ಮಸಿ ಬಳಿದು ಅಪಮಾನಗೊಳಿಸಲಾಗಿದೆ.
ಸಿ.ಜಿ ಆಸ್ಪತ್ರೆ ಬಳಿ ಪ್ರಕರಣವು ಬಡಾವಣೆ ಪೊಲೀಸ್ ಠಾಣೆಯಲ್ಲಿ ಹಾಗೂ ಹೊಸ ಬಸ್ ನಿಲ್ದಾಣದ ಪ್ರಕರಣದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ : ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಇಂದು ಪ್ರತಿಭಟನೆ ನಡೆಸಿದರು. ಈ ಸಂದ ರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವ ರಾಜ್ ಮಾತನಾಡಿ, ಕೋಮುವಾ ದಿಗಳ, ಮತೀಯವಾದಿಗಳ ಅಟ್ಟಹಾಸಕ್ಕೆ ಭಾರತಾಂಬೆ ನಲುಗು ತ್ತಿದ್ದಾಳೆ. ಇದಕ್ಕೆ ಸಾಕ್ಷಿಯಂಬಂತೆ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀ ನ್‌ಗೆ ತಡರಾತ್ರಿ ಬಂದ ಕೆಲ ಕಿಡಿಗೇಡಿಗಳು ಇಂದಿರಾ ಗಾಂಧಿ ಭಾವಚಿತ್ರಕ್ಕೆ ಮಸಿ ಬಳಿದಿರುವುದು ಖಂಡನೀಯ. ಕಿಡಿಗೇ ಡಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಈ ವೇಳೆ ಅಲ್ಲಾವಲಿ ಗಾಜಿಖಾನ್, ಹುಲ್ಮನೆ ಗಣೇಶ್, ರಾಘು ದೊಡ್ಮನಿ ಮತ್ತು ಇತರರು ಇದ್ದರು.