ದಾವಣಗೆರೆ, ಮೇ 25- ಲಾಕ್ಡೌನ್ನಿಂದ ತೊಂದರೆ ಅನುಭವಿಸುತ್ತಿರುವ ಮಂಗಳಮುಖಿಯರಿಗೆ ಎಲ್ಲೂ ಹೊರಗೆ ಹೋಗಲು ಅನುಮತಿ ಇಲ್ಲದ್ದರಿಂದ ಅವರಿಗೆ ಯಾವುದೇ ಆದಾಯವಿರದ ಕಾರಣ ಅವರು ಜೀವನ ನಡೆಸಲು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ವಿಚಾರವನ್ನು ಮನಗಂಡು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್.ಬಸವಂತಪ್ಪ ಅವರು ಅವರುಗಳಿಗೆ ತಕ್ಷಣ ಸ್ಪಂದಿಸಿ, ಲಾಕ್ಡೌನ್ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ
ಮಲ್ಲಶೆಟ್ಟಿಹಳ್ಳಿ ಮತ್ತು ಬಾಡಾ ಕ್ರಾಸ್, ಹೊನ್ನೂರು ಗೊಲ್ಲರಹಟ್ಟಿ ಹತ್ತಿರ ಇರುವ ಮಂಗಳಮುಖಿಯರಿಗೆ ಕೋಳಿ ಮತ್ತು ಅಕ್ಕಿ, ಸಾಂಬಾರ್ ಪದಾರ್ಥಗಳಿಗೆ ಹಣವನ್ನು ವಿತರಿಸಿದರು.
ಸರ್ಕಾರದವರು ಮಡಿವಾಳರಿಗೆ, ಆಟೋ, ಟ್ಯಾಕ್ಸಿ ಮತ್ತು ಇತರರಿಗೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಮಂಗಳಮುಖಿಯರಿಗೂ ಸಹ ವಿಶೇಷ ಪ್ಯಾಕೇಜನ್ನು ರಾಜ್ಯದಲ್ಲಿರತಕ್ಕಂತಹ ಎಲ್ಲಾ ಮಂಗಳಮುಖಿಯರಿಗೆ ನೀಡಿ ಅವರ ಕಷ್ಟಕ್ಕೆ ಸ್ಪಂದಿಸುವಂತೆ ಬಸವಂತಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೊನ್ನೂರು ಗೊಲ್ಲರಹಟ್ಟಿ ವೀರೇಶ್, ಕಲ್ಪನಹಳ್ಳಿ ಕಲ್ಲೇಶ್, ಮಂಜಪ್ಪ, ಮಲ್ಲಶೆಟ್ಟಿಹಳ್ಳಿ ಮುನಿಯಪ್ಪ ಮತ್ತಿತರರು ಇದ್ದರು.