ದಾವಣಗೆರೆ, ಆ.24- ಮಾಯಕೊಂಡದ ಶ್ರೀ ಕಾಶಿ ವಿಶ್ವನಾಥೇಶ್ವರ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ 2ನೇ ಶ್ರಾವಣ ಸೋಮವಾರದಂದು 100 ಮೀ. ಓಟ ಮತ್ತು ಚಿತ್ರ ಬಿಡಿಸುವ ಸ್ಪರ್ಧೆಯನ್ನು ಯು.ಕೆ.ಜಿ. ಮಕ್ಕಳಿಗೆ ನಡೆಸಲಾಯಿತು.
ಓಟದ ಸ್ಪರ್ಧೆಯಲ್ಲಿ ಶ್ರೀನಿಧಿ ಪ್ರಥಮ, ಕೊಂಗಪ್ಪರ ಕುಶಾಲ ದ್ವಿತೀಯ ಹಾಗೂ ಪಾರೇರ ಗುರು ತೃತೀಯ ಹಾಗೂ ತಿರುಮಲ ನಾಲ್ಕನೇ ಬಹುಮಾನವನ್ನು ಪಡೆದಿದ್ದಾರೆ. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಗೋವಿಂದ ಚಾರ್ ಪ್ರಥಮ, ಶ್ರೇಯಸ್, ರಾಮ, ಪವನ ಬಹುಮಾನ ಪಡೆದರು.
ಆಟಗಳಲ್ಲಿ ಶ್ರೇಯಸ್, ಶ್ರೇಯ, ಮನು, ಮೌಲ್ಯ, ಗಗನ, ಜ್ಯೋತಿ, ಕೀರ್ತನ, ಉಮೇಶ್, ಸಂಜನಾ, ಸಿಂಚನ, ಗೀತಾ, ವಿನಾಯಕ, ಮಾನಸ, ಶ್ರೀನಿಧಿ, ಧನ್ವಿತಾ, ಮಣಿ, ವಿಕಾಸ, ಪುಷ್ಪ, ಧೀರಜ್, ಭಾನುಶಂಕರ್, ದಿಶಾಂತ, ರಾಮ, ಪವನ, ಲಕ್ಷ್ಮಿದೇವಿ, ಧರಣಿ, ಭಾವನ, ಶಂಕ್ರಮ್ಮ, ಮೌಲ್ಯ ಇನ್ನಿತರೆ ಚಿಣ್ಣರು ಭಾಗವಹಿಸಿದ್ದರು.