ದಾವಣಗೆರೆ, ಆ.24- ಹೆಬ್ಬಾಳು ಗ್ರಾಮ ಪಂಚಾಯ್ತಿಗೆ ಸೇರಿದ ನೀರ್ಥಡಿ ಗ್ರಾಮದಲ್ಲಿರುವ ಕುಂದು – ಕೊರತೆಗಳನ್ನು ನೀಗಿಸದೇ ಜನರಿಗೆ ತೊಂದರೆ ಮಾಡುತ್ತಿರುವ ಬಿಲ್ ಕಲೆಕ್ಟರ್, ಕಾರ್ಯದರ್ಶಿ ಇತರೆ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೆಬ್ಬಾಳು ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯತಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಬಣದಿಂದ ಪ್ರತಿಭಟನೆ ನಡೆಸಿ ಪಿಡಿಓಗೆ ಮನವಿ ಸಲ್ಲಿಸಲಾಯಿತು.
ಹೆಬ್ಬಾಳು ಗ್ರಾಮ ಪಂಚಾಯಿತಿಗೆ ಸೇರಿದ ನೀರ್ಥಡಿ ಗ್ರಾಮದಲ್ಲಿ 450 ಮನೆಗಳಿದ್ದು, ಬಹುತೇಕರು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಇವರು ಪ್ರತಿನಿತ್ಯದ ಕೆಲಸಗಳಿಗಾಗಿ ಹೆಬ್ಬಾಳು ಗ್ರಾಮಕ್ಕೆ ಬಂದು ಹೋಗಬೇಕಾದ ಅನಿವಾರ್ಯತೆ ಇದೆ. ಆದರೆ, ಇಲ್ಲಿನ ಸಿಬ್ಬಂದಿ ವಿನಾಕಾರಣ ಗ್ರಾಮಸ್ಥರನ್ನು ಅಲೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗುಮ್ಮನೂರು ಬಸವರಾಜ್, ತಿಪ್ಪೇಶ್, ಭೀಮಣ್ಣ, ಮಂಜುನಾಥ್, ಷಣ್ಮುಖ, ರಂಗಸ್ವಾಮಿ, ಮಂಜು, ಲೋಕೇಶ್, ಬೀರಲಿಂಗಪ್ಪ, ಕೆ.ಬಿ. ಮಂಜುನಾಥ್ ಸೇರಿದಂತೆ, ಗ್ರಾಮಸ್ಥರು ಭಾಗವಹಿಸಿದ್ದರು.