ಮಕ್ಕಳ ಬೆಳವಣಿಗೆಗೆ ವೃಕ್ಷಾಸನ ಅತಿ ಮುಖ್ಯ

ದಾವಣಗೆರೆ, ಆ.3- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿ ಯಲ್ಲಿ ನಡೆದ ಯೋಗ ತರಬೇತಿಯ ಶಿಬಿರದಲ್ಲಿ ಮಕ್ಕಳ ಬೆಳವಣಿಗೆಗೆ ಅತಿ ಮುಖ್ಯವಾದ ವೃಕ್ಷಾಸನವನ್ನು ಇಂದಿನ ಯೋಗ ತರಗತಿಯಲ್ಲಿ, ವಿವರಣೆಯೊಂದಿಗೆ ಕ್ರಮಬದ್ಧ ವಾಗಿ ಮಾಡುವುದರ ಬಗ್ಗೆ  ತರಬೇತಿ ನೀಡಲಾಯಿತು. 

ನಿನ್ನೆ ನಡೆದ ಅಭ್ಯಾಸದಲ್ಲಿ ಅತಿ ಹೆಚ್ಚಿನ ಸಮಯದವರೆಗೆ ಅಂದರೆ 10 ನಿಮಿಷ 44 ಸೆಕೆಂಡ್‌ಗಳ ಕಾಲ ವೃಕ್ಷಾಸನ ಮಾಡಿ, ಹರಿಹರದ ಕು. ಸೃಷ್ಟಿ ವಿಜೇತಳಾಗಿ ಹೊರಹೊಮ್ಮಿದಳು. ದ್ವಿತೀಯ ಸ್ಥಾನವನ್ನು ಕು. ಪೃಥ್ವಿ ಹಾಗೂ ಬಾಲಕರ ವಿಭಾಗದಲ್ಲಿ ಪ್ರಣವ್ 10 ನಿಮಿಷ 30 ಸೆಕೆಂಡ್ ವೃಕ್ಷಾಸನದಲ್ಲಿ ನಿಂತು ಪ್ರಥಮ ಹಾಗೂ ಚೇತನ್ ದ್ವಿತೀಯ ಸ್ಥಾನ ಪಡೆದರು.

ಯೋಗ ಶಿಕ್ಷಕ ತೀರ್ಥರಾಜ್ ಹೋಲೂರ್ ತರಬೇತಿ ನೀಡಿದರು. ಸಾರ್ವಜನಿಕರು ಪ್ರತಿ ಶುಕ್ರವಾರ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಒಳಗೊಂಡಿರುತ್ತದೆ.

ವಿವರಗಳಿಗೆ ಯೋಗಾಚಾರ್ಯ, ತೀರ್ಥರಾಜ್ ಹೋಲೂರ್ (98800 34643) ಅಥವಾ ಪವನ್ (8310640933) ಅವರನ್ನು ಸಂಪರ್ಕಿಸ ಬಹುದು.

error: Content is protected !!