ಜಗಳೂರಿನಲ್ಲಿ ಎಸ್.ಎಫ್.ಐ. ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಜಗಳೂರು, ಫೆ.12 – ಐಟಿಐ ಆನ್ ಲೈನ್ ಪರೀಕ್ಷೆಗಳನ್ನು ಕೂಡಲೇ ರದ್ದುಪಡಿಸುವಂತೆ ಒತ್ತಾಯಿಸಿ ಎಸ್ ಎಫ್ ಐ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತದಿಂದ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ಅಂಬೇಡ್ಕರ್ ವೃತ್ತದ ಮೂಲಕ ಮಿನಿ ವಿಧಾನಸೌದದ ಬಳಿ ಜಮಾ ಯಿಸಿ ನಂತರ ತಹಶೀಲ್ದಾರ್ ಡಾ.ನಾಗವೇಣಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಕೋವಿಡ್-19 ರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ನಿಗದಿತ ಸಮಯದಲ್ಲಿ ತರಗತಿಗಳು ಆರಂಭವಾಗದೆ ವಿಷಯಾನುಕ್ರಮಣಿಕೆ ಮುಕ್ತಾಯವಾಗಿಲ್ಲ. ಆದರೆ, ಸರ್ಕಾರ ಮಾತ್ರ ಸರಿಯಾಗಿ ಮಾಹಿತಿ ನೀಡದೆ ದಿಢೀರನೇ ಆನ್ ಲೈನ್ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ತೊಂ ದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸರಿಯಾಗಿ ಲ್ಯಾಪ್‍ಟಾಪ್ ವಿತರಿಸಿಲ್ಲ, ವಿದ್ಯಾ ರ್ಥಿಗಳ ಲ್ಯಾಪ್‍ಟಾಪ್‍ಗಳನ್ನು ಕಾಲೇಜಿನಲ್ಲಿ ಬಳಸಲಾಗುತ್ತಿದೆ. ಕೈಗಾರಿಕಾ ತರಬೇತಿ ಸಂಸ್ಥೆ ಕೂಡಲೇ ತಾಂತ್ರಿಕ ಸಮಸ್ಯೆ ಪರಿಹರಿಸಿ ಪರೀಕ್ಷೆಗಳನ್ನು ನಡೆಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಕೀಲರಾದ ಆರ್.ಓಬಳೇಶ್, ಅನ್ವರ್ ಸಾಬ್, ಎಐಎಸ್‍ಎಫ್ ರಾಜ್ಯ ಸಹಕಾರ್ಯದರ್ಶಿ ಮಾದಿಹಳ್ಳಿ ಕೆ. ಮಂಜಪ್ಪ, ಎಸ್ ಎಫ್ ಐ ಜಿಲ್ಲಾ ಮುಖಂ ಡರಾದ ಅನಂತರಾಜ್, ಗೌರಿಪುರ ಮೈಲೇಶ್, ತಾಲ್ಲೂಕು ಅಧ್ಯಕ್ಷ ತಮಲೇಹಳ್ಳಿ ಅಂಜಿನಪ್ಪ, ಹೇಮರೆಡ್ಡಿ, ಜಗದೀಶ್, ಮಂಜುನಾಥ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.