ಹೊನ್ನಾಳಿ : 1.85 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಶಂಕುಸ್ಥಾಪನೆ

ಹೊನ್ನಾಳಿ, ಫೆ.13 – ತಾಲ್ಲೂಕಿನ ರೈತ ಸಮುದಾಯದ ಅನುಕೂಲಕ್ಕೆ ಎಪಿಎಂಸಿ ಆವರಣದಲ್ಲಿ ಮಳಿಗೆ ಹಾಗೂ ಸಂತೆಕಟ್ಟೆಗಳ ನಿರ್ಮಾಣಕ್ಕೆ ಶಾಸಕ ಎಂಪಿ ರೇಣುಕಾಚಾರ್ಯ ಶಂಕುಸ್ಥಾಪನೆ ನೆರವೇರಿಸಿದರು. 

ನಂತರ ಮಾತನಾಡಿದ ಅವರು, ಸುಮಾರು
48.50 ಲಕ್ಷ ರೂ. ವೆಚ್ಚದಲ್ಲಿ 4 ಮಳಿಗೆಗಳಿಗೆ ನಿರ್ಮಾಣ, 30 ಲಕ್ಷ ರೂ.ಗಳ ವೆಚ್ಚದಲ್ಲಿ ಆಡಳಿತ ಕಛೇರಿ, ಹರಾಜುಕಟ್ಟೆ, ಪರಿವರ್ತಿತ ಗೋದಾಮು, ಸಣ್ಣ ಮಳಿಗೆಗಳು ಹಾಗೂ ಎನ್‍ಜಿಆರ್‍ಜಿ ಗೋದಾಮುಗಳ ನವೀಕರಣ ಅಭಿವೃದ್ದಿ  ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಯುತ್ತಿದೆ ಎಂದರು. 

ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ  ಸೂರು ಹಾಕಿದ ಸಂತೆಕಟ್ಟೆ, ನ್ಯಾಮತಿ ತಾಲ್ಲೂಕಿನ ಎಪಿಎಂಸಿ ಆವರಣದಲ್ಲಿ 54 ಲಕ್ಷರೂ ವೆಚ್ಚದ ಮಳಿಗೆಗಳು, 10ಲಕ್ಷ ರೂ ವೆಚ್ಚದ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಗಳು ನಡೆಯಲಿವೆ ಎಂದರು. 

ಎಪಿಎಂಸಿ ಅಧ್ಯಕ್ಷ ಕೆಂಚಿಕೊಪ್ಪ ಸುರೇಶ್‍, ಉಪಾಧ್ಯಕ್ಷ ಹನುಮಂತಪ್ಪ, ನಿರ್ದೇಶಕ ಕೆ.ಪಿ ಕುಬೇಂದ್ರಪ್ಪ, ಜಿ.ಪಂ ಸದಸ್ಯೆ ಉಮಾ ರಮೇಶ್, ತಾ.ಪಂ. ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ನ್ಯಾಮತಿ ತಾ.ಪಂ ಉಪಾಧ್ಯಕ್ಷ ಮರಿಕನ್ನಪ್ಪ, ಗುತ್ತಿಗೆದಾರ ಉಮೇಶ್ ನಾಯ್ಕ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಮುಖಂಡ ರಾದ ಎಂ.ಪಿ.ರಮೇಶ್, ನೆಲವನ್ನಿ ಮಂಜುನಾಥ್, ಬಿಂಬ ಮಂಜು, ಮಹೇಂದ್ರಕುಮಾರ್, ಎಪಿಎಂಸಿ ಕಾರ್ಯದರ್ಶಿ ಯೋಗೇಶ್ವರ ಮುಂತಾದರು ಇದ್ದರು.

error: Content is protected !!