ರಂಭಾಪುರಿ ಶ್ರೀಗಳ 30ನೇ ವರ್ಷದ ಪೀಠಾರೋಹಣ ವರ್ಧಂತಿ

ರಂಭಾಪುರಿ ಪೀಠದಲ್ಲಿ ಐದು ದಿನಗಳ ಶತರುದ್ರ ಯಾಗ ಮಹಾಪೂಜೆ ಆರಂಭ

ರಂಭಾಪುರಿ ಪೀಠ (ಬಾಳೆಹೊನ್ನೂರು) ಫೆ. 10 – ಮಾನವನ ಬದುಕು ಅನೇಕ ಒತ್ತಡಗಳಿಂದ ಕೂಡಿದೆ. ಸಮಸ್ಯೆ ಸವಾಲು ಗಳ ಮಧ್ಯ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಿ ದ್ದಾನೆ. ಆತ್ಮಬಲ ಮತ್ತು ಮನೋಬಲ ಸಂವರ್ಧಿಗೆ ಧ್ಯಾನ, ಜ್ಞಾನ ಮತ್ತು ಅಧ್ಯಾತ್ಮಿಕ ಚಿಂತನೆಗಳು ಅವಶ್ಯಕವಾಗಿ ಬೇಕಾಗಿವೆ ಎಂದು ಶ್ರೀ ರಂಭಾಪುರಿ ಪೀಠದ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ. 

 ಶ್ರೀ ರಂಭಾಪುರಿ ಪೀಠದಲ್ಲಿ ತಮ್ಮ 30ನೇ ವರ್ಷದ ಪೀಠಾರೋಹಣ ವರ್ಧಂತಿ ಅಂಗವಾಗಿ ಇಂದಿನಿಂದ ಐದು ದಿನಗಳ ಕಾಲ ಹಮ್ಮಿಕೊಂಡಿರುವ ಶತರುದ್ರ ಯಾಗ ಮಹಾಪೂಜೆ ಪ್ರಾರಂಭೋತ್ಸವ ನೆರವೇರಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

 ಶಾಂತಿ ಮತ್ತು ಕೀರ್ತಿ ಎಲ್ಲರೂ ಬಯಸುವುದು ಸಹಜ. ಸಾಮಾಜಿಕ ಸಂಪ್ರ ದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಯಾವಾಗಲೂ ಶಾಶ್ವತ ವಾಗಿರುತ್ತವೆ. ವಿಚಾರ ವಿಮರ್ಶೆಗಳು ನಮ್ಮ ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸ ಬೇಕೇ ವಿನಃ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗದು. ಆಹಾರ, ನೀರು ದೇಹ ವಿಕಾಸಗೊಳಿಸಿದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿ ಪಥದತ್ತ ಸಾಗಿಸುತ್ತದೆ. ಸಾಮಾಜಿಕ ವ್ಯವಸ್ಥೆ ಯಲ್ಲಿ ನೀತಿ ಸಂಹಿತೆ ಇಲ್ಲದ ಕಾರಣ ದಿಕ್ಕು ದಾರಿ ತಪ್ಪಿ ಮನುಷ್ಯ ಬದುಕುತ್ತಿರುವುದರಿಂದ ಜೀವನ ಅಶಾಂತಿಗೆ ಕಾರಣವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾ ಧಾರಿತ ಜೀವನ ವ್ಯವಸ್ಥೆಗೆ ಆದರ್ಶವಾದ ದಾರಿ ತೋರಿಸಿದ್ದಾರೆ ಎಂದರು.

 ಶತರುದ್ರ ಯಾಗದ ನೇತೃತ್ವ ವಹಿಸಿದ ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳೆಯುವ ಜನಾಂಗದಲ್ಲಿ ದೇವರಲ್ಲಿ ಶೃದ್ಧೆ ಆಚರಣೆಯಲ್ಲಿ ನಂಬಿಗೆ ಮಾಡುವ ಕೆಲಸದಲ್ಲಿ ತನ್ಮಯತೆ ಬೆಳೆದು ಬಂದರೆ ಬಾಳು ಉಜ್ವಲಗೊಳ್ಳುವುದೆಂದರು. 

ಸಿಂಧನೂರು, ಕೆಂಭಾವಿ, ಸಂಗೊಳ್ಳಿ, ಮಸ್ಕಿ, ದೊಡ್ಡಸಗರ ಹಿರೇಮಠ, ದೊಡ್ಡಸಗರ ನಾಗಠಾಣ ಹಿರೇಮಠ, ಚಿಮ್ಮಲಗಿ ಮತ್ತು ಸಾತನೂರು ಶ್ರೀಗಳು ಪಾಲ್ಗೊಂಡಿದ್ದರು. ಪೂಜಾ ಸೇವಾ ಕರ್ತರಾಗಿ ಚಿಕ್ಕಮಗಳೂರಿನ ಸಿ.ವಿ.ಮಲ್ಲಿಕಾರ್ಜುನ, ಗದಗಿನ ರಾಜು ಮಲ್ಲಾಡದ, ಸೋಮಣ್ಣ ಮಲ್ಲಾಡದ, ಬೆಂಗ ಳೂರಿನ ಗಣೇಶ ಕುಮಾರ್, ಜೆಮ್ ಶಿವು, ದಾವಣಗೆರೆ ಬಸವರಾಜ-ಭಾರತಿ ಹಾಗೂ ಶಿವಮೊಗ್ಗದ ಶಾಂತಾ ಆನಂದ ಪಾಲ್ಗೊಂಡಿದ್ದರು. 

ಬೆಂಗಳೂರಿನ ವೇದ ವಿದ್ವಾಂಸ ಚನ್ನಬಸವಾರಾಧ್ಯರು, ಶಿವಶಂಕರ ಶಾಸ್ತ್ರಿ, ಹೊನ್ನಪ್ಪಾಜಿ ಶಾಸ್ತ್ರಿ, ಚಿಕ್ಕಮಗಳೂರಿನ ವಿರೂಪಾಕ್ಷ ಶಾಸ್ತ್ರಿ, ಹಾಸನದ ದೇವರಾಜ ಶಾಸ್ತ್ರಿ, ರಂಭಾಪುರಿ ಪೀಠದ ದಾರುಕಾಚಾರ್ಯ ಶಾಸ್ತ್ರಿ, ಶಿವಪ್ರಕಾಶ ಶಾಸ್ತ್ರಿ ಅವರುಗಳು ಶತರುದ್ರ ಯಾಗ ಪೂಜೆಯನ್ನು ಪ್ರಾರಂಭಿಸಿದರು. 

error: Content is protected !!