ಹರಪನಹಳ್ಳಿ, ಫೆ.4 – ತಾಲ್ಲೂಕಿನಲ್ಲಿ ಗುರು ವಾರ ನಡೆದ ಕೆ.ಕಲ್ಲಹಳ್ಳಿ, ಅಡವಿಹಳ್ಳಿ, ತೌಡೂರು ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಮೂರು ಗ್ರಾಮ ಪಂಚಾಯ್ತಿಗಳ ಆಡಳಿತ ಕೈ ವಶವಾಗಿದೆ.
ಕೆ.ಕಲ್ಲಹಳ್ಳಿ ಗ್ರಾ.ಪಂ : ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಾಳ್ಗಿ ತಿಮ್ಮಪ್ಪ, ಉಪಾಧ್ಯಕ್ಷ ರಾಗಿ ಜೆಡಿಎಸ್ ಬೆಂಬಲಿತ ಎಂ.ನೇತ್ರಾವತಿ ಅವರು ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. ಎಇಇ ಸಿದ್ದರಾಜು ಚುನಾವಣಾಧಿಕಾರಿ ಯಾಗಿದ್ದರು. ಪಿಎಸ್‍ಐ ಪ್ರಶಾಂತ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಚಿದಾನಂದಪ್ಪ, ಪ್ರಕಾಶ್ ಪಾಟೀಲ್, ಬಿ.ಶರಣಪ್ಪ, ಬಾಣದ ಅಂಜಿನಪ್ಪ, ಬಿ.ವಾಗೀಶ್, ಇಟ್ಟಿಗುಡಿ ಅಂಜಿನಪ್ಪ, ಬಸವರಾಜ ಮಜ್ಜಿಗೇರಿ, ಜೆಡಿಎಸ್ ಮುಖಂಡ ವಿರುಪಾಕ್ಷಪ್ಪ, ಆರ್.ಗೋಣೆಪ್ಪ, ಕೆ.ಹಾಲೇಶಪ್ಪ, ಎಂ.ಹನುಮಂತಪ್ಪ, ಜಿ.ವೀರಣ್ಣ, ಬಿ.ಮಾನಪ್ಪ, ಪ್ರಕಾಶ ನಾಯ್ಕ, ಕೆ.ಮಂಜುನಾಥ್, ನಾಗರಾಜ್ ನಾಯ್ಕ, ಮಹಾಂತೇಶ, ಮಂಜುನಾಥ, ಚಂದ್ರನಾಯ್ಕ, ರೂಪನಾಯ್ಕ, ಜೆಡಿಎಸ್‍ನ ಪುಟ್ಟನ ಗೌಡ, ಪಿ.ಪರಶುರಾಮ್, ಪಿಡಿಓ ಭೋಜಪ್ಪ, ಪ್ರಸನ್ನ, ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.
ಅಡವಿಹಳ್ಳಿ ಗ್ರಾ.ಪಂ : ಅಡವಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಚಲವಾದಿ ಪಕ್ಕೀರಪ್ಪ ಹಾಗೂ ಉಪಾಧ್ಯಕ್ಷರಾಗಿ ವಜೀರಾಬಿ ತಲಾ 10 ಮತಗಳನ್ನು ಪಡೆದು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇರುವ 19 ಜನ ಸದಸ್ಯರಲ್ಲಿ ಎರಡು ದಿನಗಳ ಹಿಂದೆ ಒಬ್ಬ ಸದಸ್ಯೆ ನಿಧನರಾಗಿದ್ದು, ಉಳಿದ 18 ಜನ ಸದಸ್ಯರು ಹಾಜರಿದ್ದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಯರಾಜ ಚುನಾವಣಾಧಿಕಾರಿ ಯಾಗಿದ್ದರು. ಪಿಡಿಒ ರಮೇಶ್ ಇದ್ದರು.
ತೌಡೂರು ಗ್ರಾ.ಪಂ : ತೌಡೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಂ.ಶೆಟ್ಟಿನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಶಾಂತವ್ವ ಆಯ್ಕೆಯಾಗಿದ್ದಾರೆ. ಒಟ್ಟು 25 ಜನ ಸದಸ್ಯರು ಹಾಜರಿದ್ದರು. ಸಿಡಿಪಿಒ ಮಂಜುನಾಥ್ ಚುನಾವಣಾಧಿಕಾರಿಯಾಗಿದ್ದರು.