ಆರೋಗ್ಯಪೂರ್ಣ ಸಮಾಜ ದೇಶದ ಸೌಭಾಗ್ಯ

ಹರಪನಹಳ್ಳಿಯಲ್ಲಿ ಉಂಡಿ ಮಂಜುಳಾ ಶಿವಪ್ಪ

ಹರಪನಹಳ್ಳಿ, ಜ.30- ಆರೋಗ್ಯಪೂರ್ಣ ಸಮಾಜ ದೇಶದ ಸೌಭಾಗ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ  ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದೇಶದಲ್ಲಿ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಎಲ್ಲಾ ಪ್ರಜೆಗಳು ಆರೋಗ್ಯವಾಗಿದ್ದರೆ, ಅದೇ ಆ ದೇಶದ ಸಂಪತ್ತಾಗಿರುತ್ತದೆ. ಮನುಷ್ಯನು ಪರಿಸರವನ್ನು ಪರಿಶುದ್ಧವಾಗಿಟ್ಟುಕೊಳ್ಳುವ ಮೂಲಕ ಕಾಯಿಲೆಗಳಿಂದ ದೂರವಿಡಬಹುದು. ಕೊರೊನಾ ಕಾಯಿಲೆ ಬಂದ ಮೇಲೆ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಸ್ಯಾನಿಟೈಸ್ ಮಾಡಿಕೊ ಳ್ಳುವುದನ್ನು ಕಲಿತೆವು.  ಅದೇ ರೀತಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ. ಇದನ್ನು ಕಾಯಿಲೆ ಬಂದ ಮೇಲೆ ಮಾಡುವ ಮುನ್ನಾ ನಿತ್ಯ ನಮ್ಮ ಕಾಯಕದಲ್ಲಿ ಅಳವಡಿಸಿಕೊಂಡಲ್ಲಿ ಎಲ್ಲರೂ ಆರೋಗ್ಯ ವಾಗಿರುತ್ತಾರೆ ಎಂದು ಕಿವಿಮಾತು ಹೇಳಿದರು.

ಹಿಂದೆ ಎಲ್ಲರೂ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ದೀರ್ಘಾಯುಷಿ ಗಳಾಗಿದ್ದರು. ಆದರೆ ಇಂದು ಕಡಿಮೆ ವಯಸ್ಸಿಗೆ ಅನೇಕ ಕಾಯಿಲೆಗಳನ್ನು ತರಿಸಿಕೊಂಡು, ನಮ್ಮ ಮನೆಯಲ್ಲಿ ಸ್ವಚ್ಛತೆ ಮಾಡಿಕೊಳ್ಳುವುದಕ್ಕೂ ಬೇರೆಯರಿಗೆ ಅವಲಂಬಿತರಾಗಿದ್ದೇವೆ. ಅದರಿಂದ ಹೊರ ಬರಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಕಚೇರಿಗಳು, ಮನೆಗಳು, ತಮ್ಮ ಪರಿಸರವನ್ನು ಸ್ವಚ್ಛವಾಗಿ, ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ಶೋಭ, ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ, ವಕೀಲರುಗಳಾದ ರಾಮನಗೌಡ ಪಾಟೀಲ್, ಕೆ.ಉಚ್ಚೆಂಗೆಪ್ಪ, ಬಂಡ್ರಿ ಗೋಣಿಬಸಪ್ಪ, ಮೃತ್ಯುಂಜಯ, ಕೆ.ಎಸ್. ಮಂಜಾನಾಯ್ಕ, ಎಚ್. ಮಲ್ಲಿಕಾರ್ಜುನ,  ಬಂಡ್ರಿ ಆನಂದ, ಮುತ್ತಿಗಿ ರೇವಣ ಸಿದ್ದಪ್ಪ, ತಿಪ್ಪೇಸ್ವಾಮಿ, ಟಿ. ಮಾರುತಿ, ನಂದೀಶ ನಾಯ್ಕ, ಓ. ತಿರುಪತಿ, ಬಿ. ಮಂಜುನಾಥ, ನಾಗರಾ ಜನಾಯ್ಕ, ಎಸ್.ಸಿ. ಹನುಮಂತ ಇನ್ನಿತರರಿದ್ದರು.

error: Content is protected !!