ಕಾನೂನನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು

ಹರಪನಹಳ್ಳಿಯ ನ್ಯಾ|| ಉಂಡಿ ಮಂಜುಳಾ ಶಿವಪ್ಪ

ಹರಪನಹಳ್ಳಿ, ಜ.26- ಸಾರ್ವಜನಿಕರು ಮಾಡುವ ಕೆಲವು ತಪ್ಪುಗಳನ್ನು ಆತ್ಮಾವಲೋಕನ ಮಾಡಿಕೊಂಡು ದೇಶದ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ 72 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ರಚನೆಯಾಗಿ ಇಂದಿಗೆ 72 ವರ್ಷ ಗತಿಸಿದ್ದು, ಭಾರತದಲ್ಲಿ ಬೃಹತ್ತಾದ ಸಂವಿಧಾನವನ್ನು ಪಡೆದುಕೊಂಡ ನಾವುಗಳು ಧನ್ಯರು. ಆದರೆ, ನಾವು ಇನ್ನೂ ಕಾನೂನು ಬಗ್ಗೆ ತಿಳಿದುಕೊಂಡಿಲ್ಲ. ದೇಶದ ಕಾನೂನನ್ನು ಯಾರೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು. ಸಾರ್ವಜನಿಕರು ಕಾನೂನನ್ನು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಳ್ಳದೆ ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕು. ಇಂತಹ ಬೃಹತ್ತಾದ ಸಂವಿಧಾನವನ್ನು ಮಹಾನಿಯರು ರಚನೆ ಮಾಡಿದ್ದಾರೆ. ಸಾರ್ವಜನಿಕರು ಜಗತ್ತನ್ನು ತಿದ್ದುವ ಬದಲು ನಮ್ಮನ್ನು ನಾವು ಮೊದಲು ತಿದ್ದಿಕೊಂಡು ಸಂವಿಧಾನವನ್ನು ಗೌರವಿಸಬೇಕು ಎಂದರು.

ಈ ಸಂದರ್ಭದಲ್ಲಿ  ಕಿರಿಯ ಸಿವಿಲ್ ನ್ಯಾಯಾಧೀಶರಾದ  ಬಿ.ಜೆ.ಶೋಭಾ, ವಕೀಲರ ಸಂಘದ ಅಧ್ಯಕ್ಷ ಕೆ.ಚಂದ್ರಗೌಡ್ರು, ಉಪಾಧ್ಯಕ್ಷ ಟಿ. ವೆಂಕಟೇಶ್, ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ್, ವಕೀಲರುಗಳಾದ  ಚಿಗಟೇರಿ ವೀರಣ್ಣ, ಕೆ.ಉಚ್ಚೆಂಗೆಪ್ಪ, ಎಂ. ಮೃತಂಜಯ್ಯ, ಕೆಂಗಳ್ಳಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.

error: Content is protected !!