ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಸಿದ್ಧತೆ

ದಾವಣಗೆರೆ, ಮಾ.19-  ಎಸ್ಸೆಸ್ಸೆಲ್ಸಿ ಪರೀಕ್ಷೆಯು ಇದೇ ಮಾರ್ಚ್‌ 21ರಿಂದ ಏಪ್ರಿಲ್‌ 4ರವರೆಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಸಾಮಾನ್ಯ (ರೆಗ್ಯುಲರ್‌), ಖಾಸಗಿ, ಪುನರಾವರ್ತಿತ ಸೇರಿದಂತೆ ಒಟ್ಟು 22,579 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

  ದಾವಣಗೆರೆ ಉತ್ತರ ಹಾಗೂ ದಕ್ಷಿಣ, ಹರಿಹರ, ಚನ್ನಗಿರಿ, ಹೊನ್ನಾಳಿ, ಜಗಳೂರು ಸೇರಿದಂತೆ ಒಟ್ಟು 81 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 

ಸಾಮಾನ್ಯ–10,587 ಬಾಲಕರು ಹಾಗೂ 11,117 ಬಾಲಕಿಯರು ಸೇರಿ ದಂತೆ ಒಟ್ಟು 21704 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪುನರಾವ ರ್ತಿತ– 499 ಬಾಲಕರು ಹಾಗೂ 141 ಬಾಲಕಿಯರು ಸೇರಿದಂತೆ ಒಟ್ಟು 640 ವಿದ್ಯಾರ್ಥಿಗಳು, ಖಾಸಗಿ–135 ಬಾಲಕರು ಹಾಗೂ 59 ಬಾಲಕಿಯರು ಸೇರಿದಂತೆ 194, ಖಾಸಗಿ ಪುನರಾವರ್ತಿತ–22 ಬಾಲಕರು ಹಾಗೂ 19 ಬಾಲಕಿಯರು ಸೇರಿದಂತೆ ಒಟ್ಟು 41 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ.

error: Content is protected !!