ದಾವಣಗೆರೆ, ಮಾ.19- ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸಲು ಒತ್ತಾಯಿಸಿ ನಾಳೆ ದಿನಾಂಕ 20ರ ಗುರುವಾರ ಬೆಳಿಗ್ಗೆ 10ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ತಿಳಿಸಿದರು.
ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಇಎಸ್ ಯಾವುದೇ ರೀತಿಯ ಚಟುವಟಿಕೆ ಕೈಗೊಳ್ಳದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಮನ ವೇದಿಕೆ ಹಾಗೂ ನಮ್ಮ ಜೈ ಕರುನಾಡ ವೇದಿಕೆ ಆಶ್ರಯದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಕನ್ನಡ ಪರ ಹೋರಾಟಗಾರರಾದ ಟಿ. ಮಂಜುನಾಥಗೌಡ, ಲಿಂಗಪ್ಪ, ರಾಜೇಂದ್ರ ಬಂಗೇರ, ಬಿ.ಎಸ್.ಪ್ರವೀಣ್ ಪಲ್ಲೇದ್ ಇದ್ದರು.