ಹನಗವಾಡಿಯಲ್ಲಿ ಸಂಭ್ರಮದ ರಥೋತ್ಸವ

ಹನಗವಾಡಿಯಲ್ಲಿ ಸಂಭ್ರಮದ ರಥೋತ್ಸವ

ಮಲೇಬೆನ್ನೂರು, ಮಾ.19- ಹನಗವಾಡಿ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವವು ಬುಧವಾರ ಸಂಜೆ  ಸಂಭ್ರಮದಿಂದ ಜರುಗಿತು. ನಾಳೆ ಗುರುವಾರ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12.30 ರವರೆಗೆ ಶ್ರೀ ಸ್ವಾಮಿಯ ಗುಗ್ಗಳ ಕಾರ್ಯಕ್ರಮವು ಶ್ರೀ ವೀರಭದ್ರೇಶ್ವರ ವೀರಗಾಸೆ ತಂಡದವರಿಂದ ಪುರವಂತರು, ಸಮಾಳದವರು ಹಾಗೂ ವಿವಿಧ ಮೇಳಗಳಿಂದ ಸಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತ್ಯಗೊಳ್ಳಲಿದೆ. ರಾತ್ರಿ 9.30 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ನಾಟ್ಯ ಕಲಾ ಸಂಘದವರಿಂದ ಹೆಚ್.ಕೆ.ಮಲ್ಲಿಕಾರ್ಜುನ್ ವಿರಚಿತ `ಸಾವು ತಂದ ಸೌಭಾಗ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.

error: Content is protected !!